ಶುಕ್ರವಾರ, ಜೂನ್ 25, 2021
29 °C

ಹಿರಿಯ ನಟ ಜೋಯ್ ಮುಖರ್ಜಿ ತೀವ್ರ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ನಟ ಜೋಯ್ ಮುಖರ್ಜಿ ತೀವ್ರ ಅಸ್ವಸ್ಥ

ಮುಂಬೈ, (ಐಎಎನ್ ಎಸ್): ತೀವ್ರ ಅಸ್ವಸ್ಥರಾಗಿರುವ ಬಾಲಿವುಡ್ ನ ಹಿರಿಯ ನಟ ಜೋಯ್ ಮುಖರ್ಜಿ ಅವರಿಗೆ ಈಗ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ.

 ~ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಜೋಯ್ ಮುಖರ್ಜಿ ಅವರಿಗೆ ಕಳೆದ 48 ಗಂಟೆಗಳಿಂದ ಕೃತಕ ಉಸಿರಾಟದ ಯಂತ್ರ ಅಳವಡಿಸಲಾಗಿದೆ. ಇನ್ನೂ 24 ಗಂಟೆಗಳ ಕಾಲ ಈ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತದೆ. ಅವರ ಆರೋಗ್ಯ ಸುಧಾರಣೆಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ~ ಎಂದು ಅವರ ಪತ್ನಿ ನೀಲಂ ಮುಖರ್ಜಿ ಅವರು ತಿಳಿಸಿದ್ದಾರೆ.

ಸುಂದರ ಮೊಗದ ಜೋಯ್ ಮುಖರ್ಜಿ ಕಳೆದ ಶತಮಾನದ 60 ದಶಕದಲ್ಲಿ ನಟಿಸಿದ್ದ ~ಲವ್ ಇನ್ ಸಿಮ್ಲಾ~, ~ಶಾಗಿರ್ದ್~ ,~ ಲವ್ ಇನ್ ಟೋಕಿಯೊ~, ~ಜಿದ್ದಿ~,  ~ಫಿರ್ ವಹಿ ದಿಲ್ ಲಾಯಾ ಹೂಂ~ ಮತ್ತು ಏಕ್ ಮುಸಾಫೀರ್ ಏಕ್ ಹಸಿನಾ ಮೊದಲಾದ ಚಿತ್ರಗಳಿಂದ ಪ್ರಸಿದ್ಧಿ ಪಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.