ಮಂಗಳವಾರ, ನವೆಂಬರ್ 12, 2019
28 °C

ಹಿರಿಯ ನಟ ಪ್ರಾಣ್‌ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

Published:
Updated:

ನವದೆಹಲಿ (ಪಿಟಿಐ): ಬಾಲಿವುಡ್‌ನ ಖ್ಯಾತ ಹಿರಿಯ ನಟ ಪ್ರಾಣ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಂದಿದೆ.ಪ್ರಾಣ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ  ಸಚಿವಾಲಯದ ಮೂಲಗಳು ತಿಳಿಸಿವೆ.93 ವರ್ಷದ ಪ್ರಾಣ್ ಸುಮಾರು 400ಕ್ಕೂ ಹೆಚ್ಚ ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಣ್ ಖಳ ನಟನಾಗಿಯೇ ಬಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದಾರೆ.ಜಿದ್ದಿ, ಮಧುಮತಿ, ರಾಮ್ ಔರ್ ಶ್ಯಾಮ್ ಚಿತ್ರಗಳು ಪ್ರಾಣ್ ಅವರಿಗೆ ಅಪಾರ ಹೆಸರನ್ನು ತಂದುಕೊಟ್ಟ ಚಿತ್ರಗಳು.

ಪ್ರತಿಕ್ರಿಯಿಸಿ (+)