ಗುರುವಾರ , ಮೇ 13, 2021
18 °C

ಹಿರಿಯ ನಾಗರಿಕರೆಂದರೆ ತಾತ್ಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು 78 ವರ್ಷದ ಹಿರಿಯ ನಾಗರಿಕ. 2000ನೆ ಇಸವಿಯ ಸ್ವಯಂ ಘೋಷಣಾ ಪದ್ಧತಿಯಡಿ ನನ್ನ ಗಿರಿನಗರದಲ್ಲಿನ ಸ್ವತ್ತಿನ ಆಸ್ತಿ ತೆರಿಗೆ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ಅನ್ಯಾಯವಾಗಿದೆ. ಈ ಬಗ್ಗೆ ಕಾನೂನು, ನಿಯಮಗಳ ಪ್ರಕಾರವೇ ಪಾಲಿಕೆಯ ಎಲ್ಲ ಹಂತಗಳಲ್ಲೂ ಪ್ರತಿಭಟಿಸಿದರೂ ನ್ಯಾಯ ದೊರಕಲಿಲ್ಲ.ಹೀಗಾಗಿ ಕೆಎಂಸಿ ಕಾಯ್ದೆಯಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದೆ.  ಅವರ ಕಚೇರಿಯಲ್ಲಿ ಈ ಸಂಬಂಧ 2010 ಜೂನ್ 14ರಂದು ವಿಚಾರಣೆ ನಡೆಯಿತು.ಈ ವಿಚಾರಣೆಗೆ ಸಂಬಂಧಿಸಿದ ತಿಳಿವಳಿಕೆ ನೋಟಿಸ್‌ನಲ್ಲಿ ನನ್ನ ಅಥವಾ ಪಾಲಿಕೆಯ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಲಾಗಿತ್ತು. ವಿಚಾರಣೆ ಕಾಲಕ್ಕೆ ಪಾಲಿಕೆ ಪ್ರತಿನಿಧಿ ಹಾಜರಿರಲಿಲ್ಲ.ವಿಚಾರಣೆ ನಡೆಸಿ ಒಂದು ವರ್ಷದ ಮೇಲಾಗಿದ್ದರೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ತಮ್ಮ ತೀರ್ಮಾನವನ್ನು ತಿಳಿಸಿಲ್ಲ. ಅವರಿಗೆ ಪದೇ ಪದೇ ಜ್ಞಾಪಕ ಪತ್ರಗಳನ್ನು ಸಲ್ಲಿಸಿದ್ದರೂ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರನ್ನು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆಯಾಗಲಿ, ಉತ್ತರವಾಗಲಿ ನನಗೆ ದೊರಕಿಲ್ಲ.ಸರ್ಕಾರಕ್ಕೆ ಬರೆದ ಪತ್ರಗಳಿಗೆ, ಮನವಿಗಳಿಗೆ ಸ್ವೀಕೃತಿ ಕೂಡ ಬರುವುದೇ ಇಲ್ಲ.

ತಮಗಿರುವ ಅಧಿಕಾರವನ್ನು ಚಲಾಯಿಸದೇ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಮತ್ತು ಬೇಕಾದರೆ ಕೋರ್ಟ್‌ಗೆ ಹೋಗಿ ಎಂದು ಸಾರ್ವಜನಿಕರಿಗೆ ಹೇಳುವುದೇ ಸರ್ಕಾರಿ ಅಧಿಕಾರಿಗಳ ಚಾಳಿಯಾಗಿದೆ.

ನನ್ನ ಸಮಸ್ಯೆಗೆ ಏನು ಪರಿಹಾರ?

 -ಎ.ವಿ. ನಾರಾಯಣಪತ್ರಗಳಿಗೂ ಕಿಮ್ಮತ್ತು ಕೊಡಿ

ಮುಂಬೈ ವಿವಿಧ ಭಾರತಿ ಪ್ರತಿ ದಿವಸ ಹಿಂದಿ ಚಿತ್ರಗೀತೆಗಳ ಕೋರಿಕೆ ಗೀತೆಗಳನ್ನು ಪ್ರಸಾರ ಮಾಡುತ್ತಿದೆ. ಬುಧವಾರ ಹಾಗೂ ಗುರುವಾರ ಎಸ್.ಎಂ.ಎಸ್. ಆಧಾರಿತ ಶ್ರೋತೃಗಳ ಕೋರಿಕೆ ಗೀತೆಗಳ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಶ್ರೋತೃಗಳ `ಪತ್ರಾಧಾರಿತ~ ಚಿತ್ರಗೀತೆಗಳನ್ನು ಪ್ರಸಾರ ಮಾಡಿ ಜನಪ್ರಿಯವಾಗಿದೆ.ಆದರೆ ನಮ್ಮ ಎಫ್‌ಎಂ ರೇಡಿಯೋ ಕೇಂದ್ರಗಳು ಅದರಲ್ಲೂ ಬೆಂಗಳೂರು ವಿವಿಧ ಭಾರತಿ ವಾಣಿಜ್ಯ ಪ್ರಸಾರ ಕೇಂದ್ರ (102.09) ಮಾತ್ರ ಪ್ರತಿ ದಿನ ಶ್ರೋತೃಗಳ ಕೋರಿಕೆ ಚಿತ್ರಗೀತೆಗಳ ಪ್ರಸಾರದಲ್ಲಿ ಎಸ್‌ಎಂಎಸ್‌ಗೆ ಪ್ರಾಮುಖ್ಯತೆ ನೀಡಿದೆ. ಇದರ ವ್ಯಾಮೋಹ ಎಷ್ಟಿದೆ ಅಂದರೆ ಈ ನಿಲಯಕ್ಕೆ ಚಿತ್ರಗೀತೆಗಳಿಗಾಗಿ `ಪತ್ರಗಳ~ ರವಾನೆಯೇ ನಿಂತು ಹೋಗಿದೆ.

 

`ಎಸ್‌ಎಂಎಸ್~ ಕಡಿಮೆ ಮಾಡಿ `ಪತ್ರಗಳಿಗೂ ಆದ್ಯತೆ ನೀಡಿ~ ಎಂಬ ನಮ್ಮ ಬೇಡಿಕೆಯನ್ನು ನಿಲಯದ ನಿರ್ದೇಶಕರು ಉಪೇಕ್ಷಿಸಿದ್ದಾರೆ. ಹೀಗಾಗಿ ಇಲ್ಲಿ ನಿತ್ಯ `ಎಸ್‌ಎಂಎಸ್~ ಆಧಾರಿತ ಚಿತ್ರಗೀತೆಗಳೇ ಪ್ರಸಾರವಾಗುತ್ತ ಇವೆ.ಭಾನುವಾರ ಹಾಗೂ ಬುಧವಾರದ `ಬೃಂದಾವನ~ದಲ್ಲಿ ಮಾತ್ರ ಆಗಾಗ್ಗೆ `ಪತ್ರಾಧಾರಿತ~ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದಾರೆ. ನಮ್ಮ ಕೋರಿಕೆ ಏನೆಂದರೆ `ಎಸ್‌ಎಂಎಸ್~ಗಳಿಗೆ ನೀಡುವಷ್ಟೇ ಆದ್ಯತೆ `ಪತ್ರ ಬರಹ~ಗಳಿಗೂ ಇರಲಿ, ಹಾಗೂ ತನ್ಮೂಲಕ ಶ್ರೋತೃಗಳ ಪ್ರಶಂಸೆ ಗಳಿಸಲಿ.

 - ಎಂ. ಪಿ. ಸ್ವಾಮಿ, ಬಿ. ಎಸ್. ರಮೇಶ್,  ನೆ. ಲ. ರಾಮಮೂರ್ತಿ

 ಆಕಾಶವಾಣಿ ಶ್ರೋತೃ ಸಂಘ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.