ಸೋಮವಾರ, ನವೆಂಬರ್ 18, 2019
27 °C

ಹಿರಿಯ ನಾಗರಿಕರೆಂದರೆ ಮಹಿಳೆಯರು ಮಾತ್ರವೇ?

Published:
Updated:

ಮೀಸಲಾತಿ ಜಾಯಮಾನಕ್ಕೆ ಪುರುಷರೂ ಬಲಿಯಾಗುತ್ತಿದ್ದಾರೆ ಎಂಬುದನ್ನು ಬಸ್ ಪ್ರಯಾಣ ಆಗಾಗ ಅನುಭವಕ್ಕೆ ತರುತ್ತಿದೆ. ಬಸ್‌ನಲ್ಲಿ ಮುಂದಿನ ಎಲ್ಲಾ ಸೀಟುಗಳನ್ನು ಮಹಿಳೆಯರಿಗಾಗಿಯೇ ಕಾದಿರಿಸಲಾಗಿದೆ. ಅಲ್ಲಿಯೇ `ಹಿರಿಯ ಮಹಿಳೆಯರಿಗೆ' ಎಂದು ಅಚ್ಚುಕಟ್ಟಾಗಿ ಬರೆಯಲಾಗಿದೆ. ಆದರೆ ಎಲ್ಲಾ ಮಹಿಳಾ ಹಿರಿಯ ನಾಗರಿಕರು ಪುರುಷರಿಗಾಗಿ ಕಾಯ್ದಿರಿಸಲಾದ `ಹಿರಿಯ ನಾಗರಿಕರು' ಜಾಗದಲ್ಲೇ ಬಂದು ಕುಳಿತುಕೊಳ್ಳುತ್ತಾರೆ.ಇದರಿಂದ ಹಿರಿಯ ಪುರುಷರು ನಿಂತುಕೊಂಡು ಹೋಗುವ ಪರಿಸ್ಥಿತಿ ಇದೆ. ಮಹಿಳೆಯರಿಗೆ ಕಾಯ್ದಿರಿಸಲಾದ ಜಾಗದಲ್ಲಿ ಯುವತಿಯರು ಕುಳಿತಿದ್ದರೂ ಅವರನ್ನು ಏಳಿಸದ ಮಹಿಳೆಯರು ಹಿಂದಿನ ಆಸನಕ್ಕೇ ಬಂದು ಯಾಕೆ ಕುಳಿತುಕೊಳ್ಳುತ್ತಾರೆ ಎಂದು ತಿಳಿಯುವುದಿಲ್ಲ.ವಯಸ್ಸು ಐವತ್ತಾದ ಮಹಿಳೆಯರು 80 ವರ್ಷದ ಹಿರಿಯರು ಬಂದರೂ ಜಾಗ ಬಿಡದೆ ಜಗಳಕ್ಕಿಳಿಯುತ್ತಾರೆ ಎಂಬುದು ದುರದೃಷ್ಟಕರ. ಈ ಬಗ್ಗೆ ಮೀಸಲು ಸೀಟುಗಳನ್ನು ಸರಿಯಾದ ವ್ಯಕ್ತಿಗಳಿಗೆ ಕೊಡಿಸುವ ಜವಾಬ್ದಾರಿ ಕಂಡಕ್ಟರ್‌ಗಳು ವಹಿಸಬೇಕು. ಸಿಬ್ಬಂದಿಗಳಿಗೆ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡುತ್ತೇನೆ.

 

ಪ್ರತಿಕ್ರಿಯಿಸಿ (+)