ಹಿರಿಯ ಪಿಟೀಲು ವಾದಕ ಗೋಪಾಲಕೃಷ್ಣನ್ ನಿಧನ

7

ಹಿರಿಯ ಪಿಟೀಲು ವಾದಕ ಗೋಪಾಲಕೃಷ್ಣನ್ ನಿಧನ

Published:
Updated:
ಹಿರಿಯ ಪಿಟೀಲು ವಾದಕ ಗೋಪಾಲಕೃಷ್ಣನ್ ನಿಧನ

ಚೆನ್ನೈ (ಪಿಟಿಐ): ಹಿರಿಯ ಪಿಟೀಲು ವಾದಕ ಎಂ.ಎಸ್. ಗೋಪಾಲಕೃಷ್ಣನ್ ಅವರು ಗುರುವಾರ ನಿಧನರಾದರು.

ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರಿಗೆ ಬುಧವಾರ ಬೆಳಿಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಅವರಿಗೆ 82 ವರ್ಷ            ವಯಸ್ಸಾಗಿತ್ತು.ಏಳು ದಶಕಗಳ ಸುದೀರ್ಘ ಕಾಲದಿಂದ ಗಾಯನ ಕ್ಷೇತ್ರದಲ್ಲಿ ತೊಡಗಿದ್ದ ಅವರಿಗೆ ಪದ್ಮಭೂಷಣ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿದ್ದವು. ಕರ್ಣಾಟಕ ಮತ್ತು ಹಿಂದೂಸ್ತಾನಿ ಸಂಗೀತ ಪ್ರಕಾರಗಳ ಬಗ್ಗೆ ಅಗಾಧ ಜ್ಞಾನವನ್ನು ಅವರು ಹೊಂದಿದ್ದರು.ಲಾಲ್ಗುಡಿ ಜಿ.ಜಯರಾಮನ್ ಮತ್ತು ಟಿ.ಎನ್.ಕೃಷ್ಣನ್ ಅವರ ಸಮಕಾಲೀನರಾದ ಗೋಪಾಲಕೃಷ್ಣನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry