ಶನಿವಾರ, ಮಾರ್ಚ್ 6, 2021
21 °C

ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ ಇನ್ನಿಲ್ಲ

ಹುಬ್ಬಳ್ಳಿ: ಹಿರಿಯ ರಂಗಕರ್ಮಿ ವಸಂತ ಕುಲಕರ್ಣಿ (86) ಭಾನುವಾರ ಇಲ್ಲಿನ ಕೇಶ್ವಾಪುರದ ಇಂದಿರಾ ನಗರದ ಅವರ ನಿವಾಸದಲ್ಲಿ ನಿಧನರಾದರು.ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿಯವರಾದ ಅವರು ರಂಗಭೂಮಿಯ ಮೇಲಿನ ಆಸಕ್ತಿಯಿಂದಾಗಿ ಗ್ರಾಮಲೆಕ್ಕಾಧಿಕಾರಿ ನೌಕರಿ ತ್ಯಜಿಸಿದರು. ನಂತರ ಸುಳ್ಳದ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಕಂಪೆನಿ, ಗುಡಗೇರಿ ಕಂಪೆನಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದರು.‘ಕುರುಕ್ಷೇತ್ರ’ ದೊಡ್ಡಾಟದಲ್ಲಿ ಅಭಿಮನ್ಯು, ‘ಅಕ್ಷಯಾಂಬರ’ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರದ ಮೂಲಕ ರಂಗಾಸಕ್ತರ ಗಮನ ಸೆಳೆದಿದ್ದರು.  ಸಾಹಿತಿ ಕಂದಗಲ್‌ ಹಣಮಂತರಾಯ, ನಲವಡಿ ಶ್ರೀಕಂಠ ಶಾಸ್ತ್ರಿ ಅವರ ಶಿಷ್ಯರಾಗಿದ್ದ ಕುಲಕರ್ಣಿ ಏಣಗಿ ಬಾಳಪ್ಪ, ಗರುಡ ಸದಾಶಿವರಾಯ, ಗುಡಗೇರಿ ಬಸವರಾಜ ಮತ್ತಿತರ ರಂಗದಿಗ್ಗಜರ ಒಡನಾಡಿಯಾಗಿದ್ದರು.ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರಾದ ವಸಂತ ಕುಲಕರ್ಣಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ಸೋದರ ಮಾವ. ಕುಲಕರ್ಣಿ ಅವರಿಗೆ ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.