ಶುಕ್ರವಾರ, ಮೇ 20, 2022
26 °C

ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ: “ಸಕಾಲದಲ್ಲಿ ನ್ಯಾಯವನ್ನು ಜನರ ಮನೆಯ ಬಾಗಿಲಿಗೆ ಒದಗಿಸುವ ಪ್ರಯತ್ನವನ್ನು ನ್ಯಾಯಾಲಯಗಳು ಮಾಡಬೇಕಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಕಾನೂನಿನ ರಕ್ಷಣೆಯಲ್ಲಿ ನ್ಯಾಯವನ್ನು ನೀಡಬೇಕು. ಅಂದಾಗ ನ್ಯಾಯಾಲಯಗಳ ನಿರ್ಮಾಣಕ್ಕೆ ಸಾರ್ಥಕತೆ ಬರುತ್ತದೆ” ಎಂದು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ, ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಹೇಳಿದ್ದಾರೆ.

ಅವರು ಶನಿವಾರ ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಲೋಕೋಪ ಯೋಗಿ ಇಲಾಖೆಯಿಂದ ರೂ. 90 ಲಕ್ಷಗಳಲ್ಲಿ ನಿರ್ಮಿಸಿದ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ನ್ಯಾಯ ಒದಗಿಸುವುದೇ ನ್ಯಾಯಾಲಯದ ಕರ್ತವ್ಯ ಎಂದರು.

ಬಡವರು, ಮಹಿಳೆಯರು ಕಾನೂನು ಸಲಹಾ ಸಮಿತಿಯ ನೆರವಿನಿಂದ ಉಚಿತವಾಗಿ ನ್ಯಾಯ ಪಡೆಯಬೇಕು. ಕಕ್ಷಿಗಾರರಿಗೆ ತೊಂದರೆಯಾಗದಂತೆ ಈಗ ಮೀಡಿಯೇಟರಸ್ ಯೋಜನೆ ತಂದಿದ್ದು ದೇಶದಲ್ಲಿಯೇ ರಾಜ್ಯ ಮುಂಚೂಣಿಯಲ್ಲಿದೆ. ಇಲ್ಲಿ ಆತ್ಮಸಾಕ್ಷಿಯಾಗಿ ನ್ಯಾಯ ನೀಡಲಾಗುವುದಲ್ಲದೆ ಬಲವಂತವಿರುವುದಿಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ ಆಡಿ, ಅನ್ಯಾಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯ ಸಿಗುವಂತಾಗಬೇಕು. ನ್ಯಾಯವನ್ನು ಮುಂದೆ ಹಾಕದೆ ನ್ಯಾಯಕೊಡಿ ಎಂದು ಕೇಳಬೇಕು ಎಂದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ನ್ಯಾಯಾಲಯಕ್ಕೆ ಬೇಕಾದ ಇ-ಲೈಬ್ರರಿ ಕಂಫ್ಯೂಟರ್ ಹಾಗೂ ಸಮುದಾಯ ಭವನಕ್ಕೆ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ದುರ್ಯೋಧನ ಐಹೊಳೆ, ಜನತೆಗೆ ನಿಷ್ಪಕ್ಷವಾಗಿ ನ್ಯಾಯ ಸಿಗುವಂತಾಗಬೇಕು ಎಂದರು. ಶಾಸಕ ಎಸ್.ಬಿ. ಘಾಟಗೆ ನ್ಯಾಯಾಲಯಕ್ಕೆ ಬೇಕಾದ ಸೌಲಭ್ಯಗಳಿಗೆ ಶಾಸಕರ ಅನುದಾನದಲ್ಲಿ ರೂ. 10 ಲಕ್ಷ ಕೊಡುವದಾಗಿ ಹೇಳಿದರು.

ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶ ಎಂ.ಎಸ್. ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಎಲ್.ಬಿ. ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಿರಿಯ ಶ್ರೇಣಿ ನ್ಯಾಯಾಧೀಶ ಟಿ.ಶಿವಣ್ಣ, ವಕೀಲರ ಸಂಘದ ಅಧ್ಯಕ್ಷ ಎಸ್. ಬಿ.ಹೋಳಕರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎನ್. ಟೆಂಗಿನಕಾಯಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಎಸ್. ಹಿರೇಮನಿ, ವಕೀಲರ ಸಂಘದ ಪದಾಧಿಕಾರಿಗಳು, ಸಿ.ಪಿ.ಐ ಗೋಪಾಲಕೃಷ್ಣ ಗೌಡರ, ಆರ್.ಎಸ್. ಪಾಟೀಲ, ಸರಕಾರಿ ವಕೀಲರಾದ ವೈ.ಜಿ. ತುಂಗಳ, ಗಾಂವಕರ, ಜಯಣ್ಣ, ಸಂಕೇಶ್ವರ, ಚಿಕ್ಕೋಡಿ ವಕೀಲರ ಸಂಘದ ಸದಸ್ಯರು, ತಾ.ಪಂ. ಅಧ್ಯಕ್ಷ ಎಲ್.ಆರ್. ಗವಾಣಿ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಜಿಲ್ಲಾ ಮತ್ತು ತಾ.ಪಂ.ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಎನ್.ಪಿ. ಮರಾಠೆ ಸ್ವಾಗತಿಸಿದರು. ಎ.ಎಂ. ಚೌಗಲಾ ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.