ಹಿರೇಕಬ್ಬಾರ ರೈತರಿಂದ ಪರಿಹಾರಕ್ಕೆ ಮನವಿ

7

ಹಿರೇಕಬ್ಬಾರ ರೈತರಿಂದ ಪರಿಹಾರಕ್ಕೆ ಮನವಿ

Published:
Updated:

ರಟ್ಟೀಹಳ್ಳಿ: ಹಿರೇಕಬ್ಬಾರ ಬಳಿ ನಿರ್ಮಿಸಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ನೀರು ಬಸಿದು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು

ಮಾಜಿ ಶಾಸಕ  ಯು.ಬಿ.ಬಣಕಾರ ಆಗ್ರಹಿಸಿದರು. ಇಲ್ಲಿನ ತುಂಗಾ ಮೇಲ್ದಂಡೆ ಕಚೇರಿಯಲ್ಲಿ ಬುಧವಾರದಂದು ನಷ್ಟ ಅನುಭವಿಸಿದ ರೈತರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತ ಚಂದ್ರಪ್ಪ ಆರೇರ ಯೋಜನೆಗಾಗಿ ಹೊಲ ಕಳೆದುಕೊಂಡು ಐದು ವರ್ಷಗಳಾಗಿದ್ದರೂ ಈವರೆಗೆ ಪರಿಹಾರ ನೀಡದೇ ಇರುವುದು ಅಮಾನವೀಯ; ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕು ಎಂದರು.ಶಿವಪ್ಪ ಹಲಗೇರಿ ಎಂಬ ರೈತನ ತೋಟ ನಾಶವಾಗಿದ್ದು, ಕಳೆದುಕೊಂಡ ಭೂಮಿಯ ಲೆಕ್ಕಾಚಾರದಲ್ಲಿ ತಪ್ಪು ಕಂಡು ಬಂದಿದೆ. ಕೂಡಲೇ ಈ ತಪ್ಪನ್ನು ಸರಿಪಡಿಸಬೇಕು. ಯೋಜನೆಯಿಂದ ಹಾಳಾ 30 ಅಡಿ ರಸ್ತೆಯನ್ನು ಪುನಃ ಗುಣಮಟ್ಟದ ರಸ್ತೆ ನಿರ್ಮಿಸಿ ಕೊಡಬೇಕು ಎಂದರು.ಸಹಾಯಕ ಎಂಜಿನಿಯರ್‌ದಯಾನಂದ ಮನವಿ ಸ್ವೀಕರಿಸಿ, ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹಾರ ನೀಡುವಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಎಪಿಎಂಸಿ ಅಧ್ಯಕ್ಷ ಶಂಕರಗೌಡ ಚನ್ನಗೌಡರ, ಸಂಗಪ್ಪ ಎಚ್, ಹನುಮಂತಗೌಡ ಪಾಟೀಲ, ವಿಜಯ ಅಂಗಡಿ, ಶಿವಾಜಪ್ಪ ಕೋಟಿಹಾಳ, ಹನುಮಂತಪ್ಪ ಅಂಗಡಿ, ಹನುಮಂತಪ್ಪ ಆರೇರ, ಹನುಮಂತಪ್ಪ ಗೂಳಣ್ಣನವರ.ಸುರೇಶ ದೊಡ್ಡಾರೇರ, ಸಣ್ಣತಿಮ್ಮಪ್ಪ ಗಿಡ್ಡಣ್ಣನವರ, ಶಿದ್ದಪ್ಪ ಆರೇರ, ಹೇಮಪ್ಪ ಅಣ್ಣಪ್ಪನವರ, ಚಂದ್ರಪ್ಪ ಆರೇರ, ರುದ್ರಪ್ಪ ಆರೇರ,  ಹನುಮಂತ ಈರಣ್ಣನವರ. ಖಂಡೆಪ್ಪ ಆರೇರ, ತಿಪ್ಪೇಶಪ್ಪ ಹೊಟ್ಟಪ್ಪಳವರ, ಬಸಪ್ಪ ಉಕ್ಕಡಗಾತ್ರಿ ಮುಂತಾದ ರೈತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry