ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಕಾಳಗ

7
ವಿಶಿಷ್ಟ ಅನುಭವ ನೀಡಿದ `ಕಾಲನೇಮಿ ಕಾಳಗ'

ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಕಾಳಗ

Published:
Updated:

ಶಿರಸಿ: ಹಳೆಯ ನೆನಪುಗಳನ್ನು ಮರುಕಳಿಸುವ ಹಿಲಾಲು ಬೆಳಕಿನಲ್ಲಿ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಗೆ ವಿಶಿಷ್ಠ ಅನುಭವ ನೀಡಿತು. ಗುರುವಾರ ತಾಲ್ಲೂಕಿನ ಕತ್ತಲೆಹಳ್ಳದ ಐನಕೈಮನೆಯಲ್ಲಿ ನಡೆದ ಯಕ್ಷಗಾನದಲ್ಲಿ ಪಂಜಿನದೇ ಬೆಳಕು. ಸೂಡಿದೀಪದ ಮೂಲಕ ಕಲಾವಿದರು ವೇದಿಕೆಗೆ ಆಗಮಿಸಿದರು. `ಕಾಲನೇಮಿ ಕಾಳಗ'ದ ಕಥಾನಕದ ನಡುವೆ ಸಿಡಿಮದ್ದಿನ ಅಬ್ಬರ, ರಕ್ಕಸರ ಆರ್ಭಟ ಇವೆಲ್ಲ ಹಿಂದಿನ ಯಕ್ಷಗಾನದ ಶೈಲಿ ನೆನಪಿಸಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಚಿಕೇರಿ ರಾಯಸಂ ಸಂಘಟನೆ ಅಧ್ಯಕ್ಷ ಜಿ.ಟಿ.ಭಟ್ಟ, `ವಿದೇಶಿಗರಿಗೆ ಅವರ ಸಂಸ್ಕೃತಿ ಮೇಲೆ ಪ್ರೀತಿ ಇರುವಂತೆ ನಮ್ಮ ಸಂಸ್ಕೃತಿಯನ್ನು ನಾವು ಪ್ರೀತಿಸಬೇಕು' ಎಂದರು.ಸಾಮಾಜಿಕ ಕಾರ್ಯಕರ್ತ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮಾತನಾಡಿ, `ಯಕ್ಷಗಾನ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಿದೆ. ದುಷ್ಟ ಸಂಹಾರ, ಶಿಷ್ಟ ಪರಿಪಾಲನೆ ಮೂಲಕ ಸಮಾಜಕ್ಕೆ ಆದರ್ಶದ ಸಂದೇಶ ನೀಡುತ್ತದೆ ಎಂದರು. ನಿವೃತ್ತ ಕಾರ್ಯ ನಿರ್ವಾಹಕ ಎಂಜಿನಿಯರ್ ಎಂ.ಎಸ್.ಜೋಶಿ, ನಾಟಕಕಾರ ರಮಾನಂದ ಐನಕೈ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಬರ ಸಂಸ್ಥೆ ಸೋಂದಾ, ಜೀವನ್ಮುಖಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷಗಾನವನ್ನು ನಾಗರಾಜ ಜೋಶಿ ನಿರ್ದೇಶಿಸಿದ್ದರು.ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶಂಕರ ಭಾಗವತ, ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ, ಗಣಪತಿ ಭಟ್ಟ, ಲಕ್ಷ್ಮೀನಾರಾಯಣ ಹೆಗಡೆ, ನರೇಂಧ್ರ ಹೆಗಡೆ, ವೆಂಕಟ್ರಮಣ ಹೆಗಡೆ, ನಾಗರಾಜ ಭಟ್ಟ, ಜಟ್ಟ ಮುಕ್ರಿ, ಅಮರ ಜೋಶಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry