ಶುಕ್ರವಾರ, ಏಪ್ರಿಲ್ 23, 2021
23 °C

ಹೀಗಾದ್ರೆ... ಒಳಿತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಯೆಟಿವ್ ಥಿಯೇಟರ್ ಇಂದು ಮತ್ತು ನಾಳೆ ರಂಗಶಂಕರದಲ್ಲಿ ಎರಡು ಜನಪ್ರಿಯ ಹಾಸ್ಯ ನಾಟಕಗಳಾದ ‘ಹೀಗಾದ್ರೆ ಹೇಗೆ’ ಮತ್ತು ‘ಆದದ್ದೆಲ್ಲಾ ಒಳಿತೆ’ ಪ್ರದರ್ಶಿಸಲಿದೆ. ಹಾಸ್ಯ ಲೇಖಕಿ ಟಿ. ಸುನಂದಮ್ಮನವರ ಕಥೆಗಳನ್ನು ಆಧರಿಸಿದ ಈ ನಾಟಕಗಳನ್ನು ಪ್ರಮೋದ ಶಿಗ್ಗಾಂವ ನಿರ್ದೇಶಿಸಿದ್ದಾರೆ. ಲಕ್ಷ್ಮಿ ಚಂದ್ರಶೇಖರ್ ಮತ್ತು ಸುಂದರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಆದದ್ದೆಲ್ಲಾ ಒಳಿತೆ ನಾಟಕದ ದೃಶ್ಯ...

ಗುರುವಾರ ‘ಹೀಗಾದ್ರೆ ಹೇಗೆ’ (ರಂಗರೂಪ: ಕೆ.ವೈ. ನಾರಾಯಣಸ್ವಾಮಿ. ಸಂಗೀತ ಗಜಾನನ ನಾಯ್ಕ. ಹಿನ್ನೆಲೆ ಗಾಯನ: ಎಂ.ಡಿ. ಪಲ್ಲವಿ. ಮೇಕಪ್: ರಾಮಕೃಷ್ಣ ಕನ್ನರ್ಪಾಡಿ. ಬೆಳಕು: ಮುದ್ದಣ್ಣ ರಟ್ಟಿಹಳ್ಳಿ).

ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾದ ಈ ನಾಟಕ 90ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.ಶುಕ್ರವಾರ ‘ಆದದ್ದೆಲ್ಲ ಒಳಿತೆ’ (ರಂಗರೂಪ: ಸುಂದರ್. ಇನ್ನಿತರ ಪಾತ್ರಧಾರಿಗಳು: ವಿದ್ಯಾ ವೆಂಕಟರಾಂ, ರಾಮಕೃಷ್ಣ ಕನ್ನರ್ಪಾಡಿ, ಶಿಲ್ಪಾ ರುದ್ರಪ್ಪ).

ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. ಟಿಕೆಟ್ ದರ 70 ರೂ. ಮಾಹಿತಿಗೆ: 96206 04479.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.