ಹೀಗೂ ಗಣಿತ ಕಲಿಯಬಹುದು...

7

ಹೀಗೂ ಗಣಿತ ಕಲಿಯಬಹುದು...

Published:
Updated:

ಬೆಂಗಳೂರು: ಸಾಮಾನ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ. ಇದೀಗ ವಿದ್ಯಾರ್ಥಿಗಳು ಆಟವಾಡುತ್ತಲೇ ಗಣಿತವನ್ನುಕಲಿಯಬಹುದು!ನಗರದ ಬ್ರೇನ್ ಸ್ಪಾರ್ಸ್ ಸಂಸ್ಥೆಯ ಆಶ್ರಯದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಗಣಿತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆ ಸುಲಭ ಎನಿಸಿದೆ. ಇಲ್ಲಿ ಹಲವಾರು ಬಗೆಯ ಆಟಗಳು, ಕುತೂಹಲಕಾರಿ ಚಟುವಟಿಕೆಗಳ ಮೂಲಕವೇ ಗಣಿತವನ್ನು ಕಲಿಸಲಾಗುತ್ತಿದೆ. ಮೂರರಿಂದ ಎಂಟನೇ ತರಗತಿವರೆಗಿನ ಸುಮಾರು 300 ವಿದ್ಯಾರ್ಥಿಗಳು ಪ್ರತಿದಿನ `ಗಲಾಟೆ' ಮಾಡುತ್ತಲೇ ಗಣಿತ ಕಲಿಕೆಯಲ್ಲಿ ತೊಡಗಿದ್ದಾರೆ. ಅಂದ ಹಾಗೆ, ಈ ಕಾರ್ಯಕ್ರಮದ ಹೆಸರೇ `ಗಲಾಟಾ: 2212 ಮ್ಯಾತ್ಸ್ ಆಡಿ, ಮಾತ್ ಆಡಿ'.ಗಣಿತೋತ್ಸವದಲ್ಲಿ ನಗರದ ಕಥೆಗಳೊಂದಿಗೆ ಸರಳವಾಗಿ ಮಕ್ಕಳಿಗೆ ಗಣಿತ ಕಲಿಸಲಾಗುತ್ತಿದೆ. ವಿವಿಧೋದ್ದೇಶ ಘನಾಕೃತಿಗಳನ್ನು ಜೋಡಿಸಿ ಕ್ರಿಕೆಟ್ ಮೈದಾನವನ್ನು ರಚಿಸಿ, ಕ್ರೀಡೆಗಳೊಂದಿಗೆ ಮಕ್ಕಳು ಗಣಿತವನ್ನು ಕಲಿಯುತ್ತಿದ್ದಾರೆ. ಅಲ್ಲದೆ ಗಣಿತ ಕಲಿಸಲು ಹಾಗೂ ಆವಿಷ್ಕಾರಗಳನ್ನು ತಿಳಿಸಲು ವ್ಯಂಗ್ಯಚಿತ್ರಗಳು, ಮುಖವಾಡಗಳು, ಪತ್ರಗಳನ್ನು ಬಳಸಲಾಗುತ್ತಿದೆ. ದಿನನಿತ್ಯ ನಡೆಯುವ ಘಟನೆಗಳು, ಅಭ್ಯಾಸಗಳ ಸಹಾಯದಿಂದ ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಲಾಗುತ್ತಿದೆ.`ಮಕ್ಕಳಿಗೆ ಗಣಿತವನ್ನು ಕಷ್ಟದ ಪಠ್ಯವೆಂದೇ ಭಾವಿಸುತ್ತಿದ್ದಾರೆ. ಮಕ್ಕಳ ಹೆದರಿಕೆಯನ್ನು ಹೋಗಲಾಡಿಸುವ ಕೆಲಸ ಆಗಬೇಕು. ಅಲ್ಲದೆ ಗಣಿತ ಕಲಿಕೆಯಲ್ಲಿ ಪರಿವರ್ತನೆ ತರಬೇಕಿದೆ. ಹೀಗಾಗಿ ಗಣಿತೋತ್ಸವದಲ್ಲಿ ನಿತ್ಯಜೀವನದಲ್ಲಿ ಕಾಣಿಸುವ ಗಣಿತದ ಅಂಶಗಳ ಪರಿಶೋಧನೆ, ಅನ್ವೇಷಣೆಯ ಪ್ರಯತ್ನ ನಡೆಸಿದ್ದೇವೆ. ಗಣಿತ ಕಲಿಕೆಯನ್ನು ವಿನೋದಮಯಗೊಳಿಸುವ ಹಾಗೂ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಂಬರ್ ನಗರ್ ಮೂಲಕ ಮೊದಲ ಹೆಜ್ಜೆ ಇಡಲಾಗಿದೆ' ಎಂದು ಸಂಸ್ಥೆಯ ನಿರ್ದೇಶಕಿ ಅನುಪಮಾ ಪ್ರಕಾಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry