ಹೀಗೆ ಬಂದು ಹಾಗೆ ಹೋದ ಮಹಿ

7

ಹೀಗೆ ಬಂದು ಹಾಗೆ ಹೋದ ಮಹಿ

Published:
Updated:

ಕೋಲ್ಕತ್ತ (ಪಿಟಿಐ): ವಿಶ್ವಕಪ್ ಹತ್ತಿರ ಬರುತ್ತಿರುವಂತೆ ಭಾರತ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಅಭ್ಯಾಸ ಮಾಡುವ ಜೊತೆಗೆ ತಮ್ಮ ಪ್ರಾಯೋಜಕ ಕಂಪೆನಿಗಳ ಪ್ರಚಾರ ಕಾರ್ಯದಲ್ಲಿಯೂ ತೊಡಗಿದ್ದಾರೆ. ಅವಸರದಲ್ಲಿ ಹತ್ತಾರು ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಬೇಕಾದ ಒತ್ತಡವೂ ಹೆಚ್ಚಿದೆ.ಇದೇ ಕಾರಣಕ್ಕಾಗಿ ಒಂದೊಂದು ಪ್ರಚಾರ ಕಾರ್ಯಕ್ರಮದಲ್ಲಿ ಕೆಲವು ನಿಮಿಷ ಕಳೆಯುವುದೂ ಕಷ್ಟವಾ ಗಿದೆ. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವ ರಂತೂ ಬೆಂಗಳೂರಿನಲ್ಲಿ ನಡೆಯಲಿ ರುವ ದೈಹಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನವೇ ತಮ್ಮೆಲ್ಲ ಪ್ರಚಾರದ ಹೊಣೆ ಮುಗಿಸುವ ಆತುರದಲ್ಲಿದ್ದಾರೆ.ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇನ್ನೂ 15 ದಿನವಷ್ಟೇ ಬಾಕಿ ಇರುವುದರಿಂದ ಅಲ್ಲಿಯೂ ಗಮನ ಹರಿಸಬೇಕು ಎನ್ನುವ ಒತ್ತಡವೂ ಆಟಗಾರರನ್ನು ಕಾಡುತ್ತಿದೆ.ಈ ಆತುರವೇ ಗುರುವಾರ ಇಲ್ಲಿ ಆಯೋಜಕರು ಹಾಗೂ ಮಾಧ್ಯಮ ದವರನ್ನು ಗಲಿಬಿಲಿಗೊಳಿಸಿತು. ಹೀಗೆ ಬಂದ ‘ಮಹಿ’ ಹಾಗೆ ಹೋಗಿ ಬಿಟ್ಟರು. ಮೂವತ್ತು ಸೆಕೆಂಡ್ ಕೂಡ ಅವರು ಕಾರ್ಯಕ್ರಮ ನಡೆದ ಪಂಚತಾರಾ ಹೋಟೆಲ್‌ನ ಭವನದಲ್ಲಿ ಕಾಣಿಸಿಕೊಳ್ಳಲಿಲ್ಲ. ಒಳಗೆ ಬಂದು ಛಾಯಾಗ್ರಾಹಕರತ್ತ ಕೈಬೀಸಿ, ನಡೆದೇಬಿಟ್ಟರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry