ಹೀಗೊಂದು ಅಪರೂಪದ ಕಲಾತಂಡ

7

ಹೀಗೊಂದು ಅಪರೂಪದ ಕಲಾತಂಡ

Published:
Updated:
ಹೀಗೊಂದು ಅಪರೂಪದ ಕಲಾತಂಡ

ಬಳ್ಳಾರಿ: ಜಾತಿ- ಮತ, ಮೇಲು- ಕೀಳು ಎಂಬ ಭೇದ- ಭಾವವಿಲ್ಲದೆ ನಗರದಲ್ಲಿ ಒಂದಾಗಿ ದುಡಿಯುತ್ತಿರುವ ಕಾರ್ಮಿಕ ವರ್ಗವೊಂದು, `ಒಗ್ಗಟ್ಟಿನಲ್ಲಿ ಬಲವಿದೆ~ ಎಂಬುದಕ್ಕೆ ನಿದರ್ಶನದಂತಿದೆ.ಸತ್ಯ ಆರ್ಟ್ಸ್ ಎಂಬ ಹೆಸರಿನಡಿ ಕೆಲಸ ಮಾಡುತ್ತಿರುವ ಈ ತಂಡದ ಒಟ್ಟು 10 ಜನ ಸದಸ್ಯರು, ಗಣೇಶ ಚತುರ್ಥಿ ವೇಳೆ ವಿಭಿನ್ನ ಆಲೋಚನಾ ಲಹರಿಯೊಂದಿಗೆ,  ಶ್ರಮಪಡುವ ಮೂಲಕ ಸ್ವಾವಲಂಬನೆಯನ್ನು ಕಂಡು ಕೊಂಡಿದ್ದಾರೆ.ಪ್ರತಿ ವರ್ಷವೂ ಗಣೇಶನ ಮೂರ್ತಿ ತಯಾರಿಸುವ ಈ ತಂಡದ ಮುಖಂಡ ಸತ್ಯನಾರಾಯಣ, ಹೊಸತನ್ನು ಬಯ ಸುವ, ನಾವೀನ್ಯಕ್ಕೆ ಹಾತೊರೆಯುವ ತಂಡದ ಇತರ ಸದಸ್ಯರೊಂದಿಗೆ ಯಶಸ್ಸನ್ನು ಗಳಿಸುತ್ತ ಬಂದಿದ್ದಾಗಿ ತಿಳಿಸುತ್ತಾರೆ.ಕೋಟ್ಯಂತರ ಆಸ್ತಿ ದೊರೆತ ಹಿನ್ನೆಲೆ ಯಲ್ಲಿ ಇತ್ತೀಚೆಗೆ ಸುದ್ದಿ ಯಾಗಿರುವ ಕೇರಳದ ದೇವಸ್ಥಾನದಲ್ಲಿ ಇರುವ ಅನಂತಪದ್ಮನಾಭನನ್ನೇ ಹೋಲುವ  ಮೂರ್ತಿ ಸಿದ್ಧಪಡಿಸಿ, ಅನಂತ ಪದ್ಮನಾಭನ ನಾಭಿಯ ಮೇಲೆ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಭಕ್ತರನ್ನು ತಣಿಸಲು ಹೊರಟಿರುವ ಈ ತಂಡದ ಸದಸ್ಯರು, ಸತತ ಎರಡು ತಿಂಗಳ ಕಾಲ ಶ್ರಮಿಸಿ ಇದೀಗ ಅಂತಿಮಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದಾರೆ.ಎಪಿಎಂಸಿ ಆವರಣದಲ್ಲಿ ಪ್ರತಿಷ್ಠಾ ಪನೆ ಆಗಲಿರುವ ಈ ಮೂರ್ತಿ, ನಗರದಾದ್ಯಂತ ಈ ಬಾರಿಯ ಗಣೇಶೋತ್ಸವದ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ ಎಂಬ ವಿಶ್ವಾಸ ಈ ತಂಡದ್ದಾಗಿದೆ.ಬಳ್ಳಾರಿಯ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಿಡಿಬಂಡೆ ಉತ್ಸವವನ್ನು ಹೋಲುವ ಮಾದರಿಯಲ್ಲಿ ಮತ್ತೊಂದು ಗಣೇಶನ ಮೂರ್ತಿ ಸಿದ್ಧಪಡಿಸಿರುವ ಈ ತಂಡ, ಬಾಳೆ ಕಾಯಿಯನ್ನೇ ಬಳಸಿ ಗಣೇಶ ವಿಗ್ರಹ ವನ್ನು ಸಿದ್ಧಪಡಿಸಲು ಅಣಿಯಾಗಿದೆ.ಕೊಪ್ಪಳ ಜಿಲ್ಲೆಯ ಕಾರಟಗಿಯ ಗಣೇಶ ಉತ್ಸವ ಸಮಿತಿಯೊಂದರ ಬೇಡಿಕೆಯ ಮೇರೆಗೆ, ಬಾಳೆ ಕಾಯಿ ಗಳನ್ನೇ ಬಳಸಿ ಗಣೇಶ ಮೂರ್ತಿ ಸಿದ್ಧಪಡಿಸಲಾಗುತ್ತಿದೆ. ಗಣೇಶೋ ತ್ಸವಕ್ಕೆ ಎರಡು ದಿನ ಮುಂಚಿತ ವಾಗಿಯೇ ಈ ಮೂರ್ತಿ ಸಿದ್ಧಗೊಳ್ಳ ಲಿದ್ದು, ಐದು ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪಿಸಿದರೂ ಬಾಳೆ ಕಾಯಿಗೆ ಧಕ್ಕೆ ಆಗುವುದಿಲ್ಲ ಎಂದು ಸತ್ಯ ನಾರಾಯಣ ತಿಳಿಸುತ್ತಾರೆ.ಗಣೇಶೋತ್ಸವ ಮಾತ್ರವಲ್ಲದೆ, ಮದುವೆ ಮತ್ತಿತರ ಸಮಾರಂಭಗಳಿಗೆ ಹೊಂದುವ ಆಲಂಕಾರಿಕ ಮೂರ್ತಿ ಗಳನ್ನು ಥರ್ಮೋಕೋಲ್‌ನಲ್ಲಿ ಸಿದ್ಧ ಪಡಿಸಿ ನೀಡುವುದು ತಂಡದ ಕಾಯಕ.ಅಂಗವಿಕಲ ಯುವಕ, ನೇಪಾಳ ಮೂಲದ ಬಿಷ್ಣು, ಕೊಟ್ರೇಶ, ಧನಂಜಯ, ಗುರುರಾಜ, ಪುರುಷೋ ತ್ತಮ, ಬದ್ರಿ, ಪೀರಾಸಾಬ್, ಆಲಂ ಮತ್ತು ಸಂತೋಷ ಈ ತಂಡದ ಕಾಯಂ ಸದಸ್ಯರಾಗಿದ್ದು, ಆವಿಷ್ಕಾರಕ್ಕೆ ಹಾತೊರೆಯುತ್ತ, ಹೊಸತನ್ನು ನೀಡುತ್ತ ಜನರನ್ನು ರಂಜಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry