ಶುಕ್ರವಾರ, ಡಿಸೆಂಬರ್ 13, 2019
17 °C

ಹೀರೊ ಲೀಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀರೊ ಲೀಪ್

ಹೀರೊ ಮೋಟೊಕಾರ್ಪ್ ಹೋಂಡಾ ಕಂಪೆನಿಯೊಂದಿಗಿನ 27 ವರ್ಷಗಳ ಸಂಬಂಧವನ್ನು ಮುರಿದುಕೊಂಡು ಇದೀಗ ಸ್ವತಂತ್ರವಾಗಿ ಹೊಸ ಹಾದಿಯತ್ತ ಸಾಗಿದೆ. ಕಂಪೆನಿ ಇತ್ತೀಚಿಗೆ ಹೈಬ್ರಿಡ್ ಸ್ಕೂಟರ್‌ನ ಮಾದರಿ ವಿನ್ಯಾಸವನ್ನು ಅನಾವರಣಗೊಳಿಸಿತು. ಲೀಪ್ ಎಂಬ ಹೆಸರಿನ ಈ ಸ್ಕೂಟರ್ ಪೆಟ್ರೋಲ್ ಹಾಗೂ ಬ್ಯಾಟರಿಯಿಂದ ಚಲಿಸುವ ಸಾಮರ್ಥ್ಯ ಹೊಂದಿದೆ.ಹೈಬ್ರಿಡ್ ಸ್ಕೂಟರ್ ಲೀಪ್‌ನ ತಂತ್ರಜ್ಞಾನಕ್ಕಾಗಿ ಕಂಪೆನಿ ಮೂರು ಅಂತರರಾಷ್ಟ್ರೀಯ ಪೇಟೆಂಟ್ ಹಾಗೂ ಇದರ ವಿನ್ಯಾಸಕ್ಕೆ ಒಂಬತ್ತು ಅಂತರರಾಷ್ಟ್ರೀಯ ಪೇಟೆಂಟ್ ಪಡೆದುಕೊಂಡಿದೆ. ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಭಾರತದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಯೂ ಇದರದ್ದು. ಹೀರೊ ಮೋಟೊಕಾರ್ಪ್‌ನ ಈ ಸಾಧನೆಗೆ ವಿದೇಶಿ ಕಂಪೆನಿಗಳ ಸಾಥ್ ಕೂಡಾ ಇದೆ.

ಪ್ರತಿಕ್ರಿಯಿಸಿ (+)