ಹುಂಬನೊಬ್ಬನ ಹಿನ್ನೋಟಗಳು

7

ಹುಂಬನೊಬ್ಬನ ಹಿನ್ನೋಟಗಳು

Published:
Updated:

ಚನ್ನಪಟ್ಟಣದ ಸ್ವಪ್ರಭಾನಂದ ಅವರು ವೃತ್ತಿಯಿಂದ ವರ್ತಕರು. ಸಾಹಿತ್ಯ, ಸಂಸ್ಕೃತಿ ಅವರ ಗೌರವಕ್ಕೊಳಗಾದ ಕ್ಷೇತ್ರಗಳು. ವ್ಯಾಪಾರದಲ್ಲಷ್ಟೇ ಮುಳುಗದೆ, ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಹೃದಯಿಗಳು ಅವರು. ಸುಮಾರು ಐವತ್ತು ಅರವತ್ತು ವರ್ಷಗಳ ಅವರ ಸಾಂಸ್ಕೃತಿಕ ಚಟುವಟಿಕೆಗಳ ನೆನಪುಗಳು ‘ಹುಂಬನೊಬ್ಬನ ಹಿನ್ನೋಟಗಳು’ ಕೃತಿಯಲ್ಲಿ ಸಂಕಲನಗೊಂಡಿವೆ. ಬೇಂದ್ರೆ, ಕಾರಂತ, ಕೆ.ಎಸ್.ನರಸಿಂಹಸ್ವಾಮಿ ಅವರಂಥ ಲೇಖಕರನ್ನು ಚನ್ನಪಟ್ಟಣಕ್ಕೆ ಕರೆಸಿ ಒಡನಾಡಿದ ಹೆಮ್ಮೆ ಶರ್ಮರದು. ಈ ಕೃತಿ ಶರ್ಮರ ಸರಳತೆ, ಜೀವನಪ್ರೀತಿ ಹಾಗೂ ಸಾತ್ವಿಕ ಸ್ವಭಾವದ ಅಕ್ಷರರೂಪದಂತಿದೆ. ಶರ್ಮರು ತಮ್ಮನ್ನು ತಾವು ಹುಂಬ ಎಂದು ಕರೆದುಕೊಳ್ಳುವುದನ್ನು ನೋಡಿದರೆ, ಇಂಥ ಹುಂಬರು ಊರಿಗೊಬ್ಬರಾದರೂ ಇರಬೇಕು ಎನ್ನಿಸುತ್ತದೆ.

ಹುಂಬನೊಬ್ಬನ ಹಿನ್ನೋಟಗಳು

ಲೇ: ಬಿ.ಪಿ.ಸ್ವಪ್ರಭಾನಂದ ಶರ್ಮ; ಪು:192; ಬೆ: ರೂ. 150; ಪ್ರ: ಗಿರೀಶ್ ಪ್ರಕಾಶನ, 172, ಶಾರದಾ ನಿಲಯ, ರೆಡ್ಡಿಗೇರಿ, ಚನ್ನಪಟ್ಟಣ,ರಾಮನಗರ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry