ಭಾನುವಾರ, ಮಾರ್ಚ್ 7, 2021
25 °C

ಹುಕ್ಕೇರಿಮಠಕ್ಕೆ ಉದಾಸಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿಮಠಕ್ಕೆ ಉದಾಸಿ ಭೇಟಿ

ಹಾವೇರಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಶುಕ್ರವಾರ ನಗರದ ಹುಕ್ಕೇರಿಮಠಕ್ಕೆ ಭೇಟಿ ನೀಡಿ  ಸದಾಶಿವ ಶ್ರೀಗಳ ಆಶೀರ್ವಾದ ಪಡೆದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಶಿವರಾಜ ಸಜ್ಜನರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಬಸವರಾಜ ಮಾಸೂರ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.ಮತಯಾಚನೆ: ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಬೆಂಬಲಿಸಿ ಬಿಜೆಪಿ ಶಹರ ಘಟಕದ ಕಾರ್ಯಕರ್ತರು ಶುಕ್ರವಾರ ಮನೆಮನೆಗೆ ತೆರಳಿ ಮತಯಾಚಿಸಿದರು.ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ತಿಳಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತಯಾಚನೆ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಮುಖಂಡರಾದ ನಾಗೇಂದ್ರ ಕಟಕೋಳ, ಲಲಿತಾ ಗುಂಡೆನಹಳ್ಳಿ, ಸುರೇಶ ದೊಡ್ಡಮನಿ, ಹನುಮಂತ ನಾಯಕ ಬದಾಮಿ, ಶಿವಬಸಪ್ಪ ವನ್ನಳ್ಳಿ, ಜಗದೀಶ ಮಲಗೋಡ, ನಿರಂಜನ ಹೇರೂರ, ಕರಬಸಪ್ಪ ಹಳದೂರ, ಹನುಮಂತಪ್ಪ ದೇವಗಿರಿ, ಸತೀಶ ಹಾವೇರಿ, ಪರಶುರಾಮ ಮೈಲಾರಪ್ಪನವರ, ಇರ್ಪಾನ್ ಪಠಾಣ, ಉಮಾಪತಿ ಹೂಲಿಕಟ್ಟಿ, ಚಂದ್ರು ಯರೆಸೀಮಿ, ದಾನಪ್ಪ ಜುಗಾಂವ, ಹನುಮಂತಪ್ಪ ಪುಜಾರ, ಮಹಿಳಾ ಶಹರ್ ಮೋರ್ಚಾ ಅಧ್ಯಕ್ಷರಾದ ಜೋತಿ ಸಾತೇನಹಳ್ಳಿ, ಶಿವಲಿಂಗಪ್ಪ ಕಲ್ಯಾಣಿ, ಅಲ್ಲಾಭಕ್ಷ ತಿಮ್ಮಾಪುರ, ಖಾಜಿ ವಕೀಲರು, ಮಂಜುನಾಥ ಪುತಳೇಕರ, ಹನುಮಂತಪ್ಪ ನೂಕಾಪುರ, ಪ್ರಕಾಶ ಹುರಳಿಕುಪ್ಪಿ, ವಿಜಯಕುಮಾರ ಚಿನ್ನಿಕಟ್ಟಿ, ಶಿವಬಸಪ್ಪ, ಹಲಗಲಿ, ಶಿವರಾಜ ಹೆರೂರ, ಮುಂತಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.