ಹುಕ್ಕೇರಿಯಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತ

7

ಹುಕ್ಕೇರಿಯಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತ

Published:
Updated:

ಹುಕ್ಕೇರಿ: ಭಾನುವಾರ ಸುರಿದ ಭಾರಿ ಮಳೆಯಿಂದ ಜನರು ತೊಂದ­ರೆಗೆ ಸಿಲು­ಕಿದ ಘಟನೆ ಪಟ್ಟಣದಲ್ಲಿ ಕಂಡು ಬಂದಿತು. ಮಧಾ್ಯಹ್ನ 2ರ ಸುಮಾರಿಗೆ ಆರಂಭ­ವಾದ ಮಳೆಯು ಪಟ್ಟಣ ಸೇರಿದಂತೆ ಸುತ್ತ­­ಮುತ್ತಲಿನ ಪ್ರದೇಶದಲ್ಲಿ ಸುಮಾರು 2 ಗಂಟೆಗಳ ಕಾಲ ಸುರಿ­ಯಿತು.  ಪಟ್ಟ­ಣದ ಮಧ್ಯ ಭಾಗ­ದಲ್ಲಿ ಹಾಯು್ದ ಹೋಗುವ ’ಲಂಡೂರಿ ಹಳ್ಳ’ ತುಂಬಿ­ಕೊಂಡು ಕೋಟೆ ಭಾಗದ ಶಾಲೆಯ ಆವ­ರಣ ನೀರಿನಿಂದ ತುಂಬಿ­ಕೊಂಡಿತು. ಭಾನು­ವಾರ ಆಗಿ­ದ್ದರಿಂದ ಶಾಲಾ ಮಕ್ಕಳು ಶಾಲೆಯಲ್ಲಿ ಇರಲಿಲ್ಲ.ಗಜ­ಬಾರವಾಡಿಯ ರಸೆ್ತಯ ಮೂಲಕ ಹರಿದು ಬರುವ ನೀರು ಸಾರ್ವಜನಿಕ ಗ್ರಂಥಾಲಯದ ಮುಂದಿನ ಹಳೆ ಬೆಳಗಾವಿ ರಸೆ್ತ ನೀರಿನಲ್ಲಿ ಮುಳಗಿ ಹೋಗಿ ಸಂಚಾರಕ್ಕೆ ಅಡ್ಡಿಯಾಯಿತು. ಬೈಪಾಸ್‌ ರಸೆ್ತಯಿಂದ ಹರಿದು ಬರುವ ನೀರು ಉಪ್ಪಾರ ಗಲ್ಲಿ ಮತ್ತು ಅಕ­್ಕ­ಪಕ್ಕದ ಜಾಗೆಯಲ್ಲಿ ಹರಿದು ಸುತ್ತಮುತ್ತಲಿ ಮನೆಯಲ್ಲಿ ಸೇರಿಕೊಂಡು ಹಾನಿ ಉಂಟು ಮಾಡಿತು. ಕೆಲವೊಂದು ಕಡೆ ಮನೆಯ ಗೋಡೆಗಳು ಬಿದ್ದ ವರದಿ­ಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry