ಹುಕ್ಕೇರಿ ತಾ.ಪಂಗೆ ಅವಿರೋಧ ಆಯ್ಕೆ

7

ಹುಕ್ಕೇರಿ ತಾ.ಪಂಗೆ ಅವಿರೋಧ ಆಯ್ಕೆ

Published:
Updated:

ಹುಕ್ಕೇರಿ: ತಾಲ್ಲೂಕು ಪಂಚಾಯಿತಿಯ ಎರಡನೆ  ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಶುಕ್ರವಾರ ನಡೆಯಿತು. ಅಧ್ಯಕ್ಷೆಯಾಗಿ ಕಣಗಲಾ ಕ್ಷೇತ್ರದ  ಶೋಭಾ ಅಶೋಕ ಹಿರೇಕುಡಿ ಹಾಗೂ ಉಪಾಧ್ಯಕ್ಷರಾಗಿ ಬಸ್ಸಾಪುರ ಕ್ಷೇತ್ರದ ಗಣಪತಿ ಬಾಳಪ್ಪಾ ಹುಲಕುಂದ  ಆಯ್ಕೆಯಾದರು.ಒಟ್ಟು31 ಸ್ಥಾನಗಳಲ್ಲಿ 27ಸದಸ್ಯರು ಬಿಜೆಪಿ ಪಕ್ಷದ ಸದಸ್ಯರು ಇರುವುದರಿಂದ  ಅವಿರೋಧ ಅಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ  ವರ್ಗಕ್ಕೆ ಮೀಸಲಾಗಿತ್ತು.  ಶೋಭಾ ಹಿರೇಕುಡಿ  ಅಧ್ಯಕ್ಷ ಸ್ಥಾನಕ್ಕೆ ಮತ್ತು ಗಣಪತಿ ಹುಲಕುಂದ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಸದಸ್ಯರಾದ ಮಹಾಲಿಂಗ ಸನದಿ  ಮತ್ತು ಸುರೇಂದ್ರ ಶೇರವಿ ಅನುಕ್ರಮವಾಗಿ ಹೆಸರು ಸೂಚಿಸಿದರು.ಪ್ರಭಾರಿ ಉಪವಿಭಾಗಾಧಿಕಾರಿ ಪ್ರೀತಮ ನಸಲಾಪುರೆ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಫಲಿತಾಂಶ ಘೋಷಿಸಿದರು. ತಹಶೀಲ್ದಾರ ಎಸ್.ಎಸ್. ಬಳ್ಳಾರಿ, ತಾ.ಪಂ. ಇಒ ಎ.ಬಿ. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.ಉಪಸ್ಥಿತಿ

ಕೃಷಿ ಸಚಿವ ಉಮೇಶ ಕತ್ತಿ  ಮಾರ್ಗದರ್ಶನದಲ್ಲಿ ಹಾಗೂ ಸಂಸದ ರಮೇಶ ಕತ್ತಿ ಅವರ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ  ಮಾಜಿ ಸಚಿವ ಶಶಿಕಾಂತ ನಾಯಿಕ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಪುರಸಭೆ ಅಧ್ಯಕ್ಷ ಅಮರ ನಲವಡೆ, ತಾ.ಪಂ. ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ, ಬಿಜೆಪಿ ಘಟಕ ಅಧ್ಯಕ್ಷ ಪರಗೌಡ ಪಾಟೀಲ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಟಿ.ಎ.ಪಿ.ಸಿ. ಎಂ.ಎಸ್. ಅಧ್ಯಕ್ಷ ಈರಣ್ಣ ಹಾಲದೇವರಮಠ, ನಿರ್ದೆಶಕ ಸುನೀಲ ಪರ್ವತಕರ, ಅಭಯ ಕುರಣಕರ, ಹಿರಾಶುಗರ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ರಮೇಶ ಕುಲಕರ್ಣಿ, ಗುರು ಕುಲಕರ್ಣಿ, ಜಿ.ಪಂ. ಸದಸ್ಯರಾದ ಶೋಭಾ ಮದಕರಿ,  ಮಕುಬುಲ್ ಸಾಹೇಬ ಮುಲ್ಲಾ, ಪರಶುರಾಮ ನಾಯಿಕ,  ತಾ.ಪಂ. ಸದಸ್ಯರು ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry