ಹುಚ್ಚಾಪಟ್ಟೆ ಕಾರು ಚಾಲನೆ: ಗಾಯ

7

ಹುಚ್ಚಾಪಟ್ಟೆ ಕಾರು ಚಾಲನೆ: ಗಾಯ

Published:
Updated:

ಬೀಜಿಂಗ್ (ಪಿಟಿಐ): ಕೋಪೋದ್ರಿಕ್ತನಾದ ವ್ಯಕ್ತಿಯೊಬ್ಬ 23 ಮಕ್ಕಳಿದ್ದ ಗುಂಪೊಂದರ ಮೇಲೆ ಕಾರು ಚಾಲನೆ ಮಾಡಿದ್ದರಿಂದ ಮಾಧ್ಯಮಿಕ ಶಾಲೆಯ 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಚೀನಾದಲ್ಲಿ ಮಂಗಳವಾರ ನಡೆದಿದೆ.ನ್ಯಾಯಾಲಯವು ತನ್ನ ಮಗಳ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಿಲ್ಲ  ಎಂದು ಅಸಮಾಧಾನಗೊಂಡ ತಂದೆಯೊಬ್ಬ ಹುಚ್ಚಾಪಟ್ಟೆಯಾಗಿ ಕಾರು ಚಾಲನೆ ಮಾಡುತ್ತಿದ್ದ. ಮಕ್ಕಳ ಗುಂಪಿನ ಮೇಲೂ ಕಾರನ್ನು ನುಗ್ಗಿಸಿದ. ಈ ಕಾರಿನಲ್ಲಿ ಅಪಾಯಕಾರಿ ಅನಿಲ ಶೇಖರಿಸಿದ್ದ ಟ್ಯಾಂಕ್ ಮತ್ತು ಪಟಾಕಿಗಳು ಇದ್ದವು.48 ವರ್ಷದ ಈ ವ್ಯಕ್ತಿ ಉದ್ಯೋಗದಲ್ಲಿ ಅಸ್ಥಿರತೆ  ಹೊಂದಿದ್ದ ಮತ್ತು ವಿವಾಹ ವಿಚ್ಛೇದನ ಪಡೆದಿದ್ದ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry