ಹುಚ್ಚು ದೊರೆ

ಹುಚ್ಚು ದೊರೆ
ಇಲ್ಲಿ ನಿತ್ಯ ಬರ, ಜಲ ಕ್ಷಾಮ
ಸಾಯುತ್ತಿದ್ದಾರೆ ಜನ
ದುಡಿವ ಕೈಗಳಿಗೆ ಕೆಲಸವಿಲ್ಲ,
ತಿನ್ನುವ ಬಾಯಿಗೊಂದು
ರೊಟ್ಟಿಯೂ ಇಲ್ಲ
ಅಳುವ ಮಕ್ಕಳಿಗೆ ಹಬ್ಬದ
ಕಥೆ ಹೇಳಿ ಸಂಬಾಳಿಸುವ ಅಮ್ಮ
`ನಾಯಕರಿಗೆ~ ಸ್ವಂತದ ಚಿಂತೆ
ಸಂತೆಯಲ್ಲೇ ಸುಖದ ನಿದ್ದೆ
ಎಚ್ಚರದಲ್ಲಿ ವಿದೇಶ
ಯಾತ್ರೆಯ ಕನಸು
ಇದನ್ನೆಲ್ಲ ನೋಡಿ ನಗುತ್ತಿದ್ದಾನೆ
ದೇವರೆಂಬ ಹುಚ್ಚು `ದೊರೆ~.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.