ಹುಚ್ಚು ಮಂಗ ಕಚ್ಚಿ ಬಾಲಕನಿಗೆ ಗಾಯ

7

ಹುಚ್ಚು ಮಂಗ ಕಚ್ಚಿ ಬಾಲಕನಿಗೆ ಗಾಯ

Published:
Updated:

ಭಟ್ಕಳ: ಮನೆಯೊಳಗಿದ್ದ ಐದು ವರ್ಷದ ಬಾಲನೊಬ್ಬನಿಗೆ ಹುಚ್ಚು ಮಂಗವೊಂದು ಒಳಗೆ ನುಗ್ಗಿ ಕಚ್ಚಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಟ್ಟಣದ ಮುಗ್ದುಂ ಕಾಲೊನಿಯಲ್ಲಿ ನಡೆದಿದೆ.ಸಮನ್ ಅಬ್ದುಲ್ ಮಹ್ಮದ್ ಗಾಯಗೊಂಡ ಬಾಲಕ. ಮಂಗ ಸಿಕ್ಕ ಸಿಕ್ಕ ಕಡೆಯ್ಲ್ಲಲೆಲ್ಲಾ ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡು ರಕ್ತ ಒಸರುತ್ತಿದ್ದ ಬಾಲಕನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಪಟ್ಟಣದ ಅಮಿತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಈ ಭಾಗದಲ್ಲಿ ಹಿಂದೆಯೂ ಐದಾರು ಜನರಿಗೆ ಹುಚ್ಚು ಮಂಗವೊಂದು ಕಚ್ಚಿ ಗಾಯಗೊಳಿಸಿದ್ದು, ಮಂಗನನ್ನು ಹಿಡಿಯಲು ಅರಣ್ಯ ಇಲಾಖೆಯನ್ನು ಕೋರಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮುಗ್ದುಂ ಕಾಲೋನಿಯ ನಾಗರಿಕರು ಆರೋಪಿಸಿದ್ದಾರೆ.7ಜನರಿಗೆ ಗಾಯ

ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿದ ಪ್ರಯಾಣಿಕರ ಟೆಂಪೊವೊಂದು ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಏಳು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲ್ಲೂಕಿನ ಬೇಂಗ್ರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.ಗಾಯಗೊಂಡವರನ್ನು ಪ್ರಕಾಶ ವಾಸುದೇವ, ಪ್ರೇಮಾ ಸುರೇಶ ಶೆಟ್ಟಿ, ಮಾದೇವ ಕುಳ್ಳ ನಾಯ್ಕ, ಶಿವರಾಜ ನಾಯ್ಕ, ವಿನಾಯಕ ಎಂ. ನಾಯ್ಕ, ಮೋಹನ ಎಸ್. ನಾಯ್ಕ ಮತ್ತು ತಾರಾ ಎ. ಮೊಗೇರ ಎಂದು ಗುರುತಿಸಲಾಗಿದೆ.ಇವರಲ್ಲಿ ಗಂಭೀರ ಗಾಯಗೊಂಡ ಪ್ರಕಾಶ ವಾಸುದೇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೆ, ಉಳಿದವವರನ್ನು ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಟೆಂಪೋ ಹೊನ್ನಾವರದಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry