ಶುಕ್ರವಾರ, ಏಪ್ರಿಲ್ 16, 2021
31 °C

ಹುಟ್ಟಿದ ಮಗುವಿನ ಮೊದಲ ನುಡಿ ಕನ್ನಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಮಗು ಜನಿಸುವಾಗ ಮೊದಲು ಅವ್ವಾ..! ಅವ್ವಾ..! ಎಂದು ಕನ್ನಡ ಭಾಷೆಯನ್ನು ಉಚ್ಚರಿಸುತ್ತದೇ ವಿನಃ ಮಮ್ಮಿ, ಡ್ಯಾಡಿ ಎಂದು ಆಂಗ್ಲ ಭಾಷೆಯನಲ್ಲ~ ಎಂದು  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಂಗಾಧರ ನಂದಿ ಹೇಳಿದರು.ತಾಲ್ಲೂಕಿನ ದೇವಗಿರಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕನ್ನಡ ಭಾಷೆಗೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ಆದರೆ, ಪಾಲಕರು ಮಕ್ಕಳ ಮೇಲೆ ಒತ್ತಡ ತರುವ ಮೂಲಕ ಅವರನ್ನು ಆಂಗ್ಲಭಾಷೆಯ ವ್ಯಾಮೋಹಕ್ಕೆ ನೂಕುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಉಪನ್ಯಾಸಕ ರವಿರಾಜ್ ಕೋರ್ಪಡೆ ಬರೆದ ಸ್ಪರ್ಧಾ ತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪುಸ್ತಕ ಬಿಡುಗಡೆ ಮಾಡಿದ ಅವರು, ವಿದ್ಯಾರ್ಥಿಗಳು ಇಂದು ಆತ್ಮವಿಶ್ವಾಸ ದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯುವಲ್ಲಿ ಇಂತಹ ಪುಸ್ತಕಗಳು ಸಹಾಕಾರಿಯಾಗು ತ್ತವೆ ಎಂದರು.

ಉಪನ್ಯಾಸಕ ಶಿವನಗೌಡ ಪಾಟೀಲ `ಕನ್ನಡ ನಾಡಿಗಡೆ ಹಾವೇರಿಯ ಕೊಡುಗೆ~ ವಿಷಯ ಕುರಿತು ಉಪನ್ಯಾಸ ನೀಡಿದರು.ಉಪನ್ಯಾಸಕಿ ಎಂ.ವಿ.ಶೀತಿಕೊಂಡ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಟಿ.ಎಂ.ಹಕೀಮ್ ಮಾತನಾಡಿದರು.

ಈ ಸಂದರ್ಭದಲ್ಲಿ ವಿರೇಶ ಹೊನ್ನಪ್ಪ ನವರ, ಎಂ.ಎಂ.ಕರಡಿ, ಸಿ.ಎಂ.ಕಮ್ಮಾರ ಹಾಜರಿದ್ದರು.ಚೈತ್ರಾ ಕಾಟೇನಹಳ್ಳಿ ನಾಡಗೀತೆ ಹಾಡಿದರು. ಎಸ್.ಜಿ.ಇಟಗಿಮಠ ಸ್ವಾಗತಿಸಿದರು. ತಬಿಯಾಬಾನು ವಂದಿಸಿದರು.ಸಾರಿಗೆ ಸಂಸ್ಥೆ ಕಚೇರಿಯಲ್ಲಿ: ನಗರದ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಯಿತು.ಸಾರಿಗೆ ವಿಭಾಗದ ನಿಯಂತ್ರಣಾಧಿ ಕಾರಿ ಎಂ.ಎನ್.ವೆಂಕಟೇಶ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಕನ್ನಡನಾಡಿ ಸಂಸ್ಕೃತಿ ಪರಂಪರೆಯನ್ನು ಇತಿಹಾಸ ಪುಟದಲ್ಲಿ ಮತ್ತಷ್ಟು ಪ್ರಜ್ವಲಿ ಸುವಂತೆ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.ಬಾಲಕಿ ದಿವ್ಯಾ ಕನ್ನಡ ನಾಡು- ನುಡಿಯ ಕುರಿತು ಮಾತನಾಡಿದಳು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವದ ಅಂಗವಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿ ಪಿ.ಎಚ್. ದೊಡ್ಡಮನಿ, ಹೂಗಾರ, ಮಂಜುನಾಥ ಸವಣೂರ, ಶಂಕರ ಮಡಿವಾಳರ, ಶ್ರಿನಿವಾಸ ನಾಮದೇವ, ನೌಶಾದ್ ತಾವರಗಿ, ವಿನಾಯಕ ಸಣ್ಣಾಗಣ್ಣನವರ    ವೀರ ಸಿಂಧೂರ ಲಕ್ಷ್ಮಣ ವೇಶದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಹರೀಂದ್ರನಾಥ, ನಾಗೇಂದ್ರ, ಇಟಗಿ, ಡಿ.ಎನ್.ಅಂಬಿಕಾ, ರವಿ, ಶಾರದಾ ಅಂಬಲಿ, ರವಿ ಅಂಗಡಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಹಿಂಚಗೇರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.