ಶುಕ್ರವಾರ, ಫೆಬ್ರವರಿ 26, 2021
31 °C

ಹುಡಗಿ: ಕರಿಬಸವೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಡಗಿ: ಕರಿಬಸವೇಶ್ವರ ಜಾತ್ರೆ

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮದ ಪ್ರಸಿದ್ಧ ಪ್ರವಾಡ ಪುರುಷ ದಿಗಂಬರ ಕರಿಬಸವೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ಅಪಾರ ಸಂಖ್ಯೆ ಭಕ್ತಾದಿಗಳು ಭಾಗವಹಿಸಿ, ದರ್ಶನ ಆಶಿರ್ವಾದ ಪಡೆದು ಕೃತಾರ್ಥರಾದರು.ಬಸವಜಯಂತಿ ನಂತರದ 3ನೇ ದಿನದಿಂದ ಪಲ್ಲಕ್ಕಿ ಉತ್ಸವ ಆರಂಭಗೊಳ್ಳುತ್ತದೆ. ಹಿರೇಮಠದ ವೀರೂಪಾಕ್ಷ ಸ್ವಾಮಿಜಿ ಅವರ ದಿವ್ಯ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಪಲ್ಲಕ್ಕಿ ಉತ್ಸವ ಸಾಗುತ್ತದೆ. ಡೊಳ್ಳು ಕುಣಿತ, ಭಜನೆ, ಯುವಕರ ಚಿಟಿಕೆ ಭಜನೆ ತಂಡ, ತುಂಬಿದ ಕಳಶಹೊತ್ತ ಮಾತೆಯರ ಶೋಭಾಯಾತ್ರೆ, ಗ್ರಾಮೀಣ ಭಾಗದ ವೈವಿಧ್ಯಮಯ ಕಲಾತಂಡಗಳು ನಡೆಸಿಕೊಡುವ ಆಕರ್ಷಕ ಪ್ರದರ್ಶನ ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿರುತ್ತವೆ. ಸದಾಲಾಪೂರದ ಸಿದ್ದಯ್ಯಾ ಸ್ವಾಮಿಜಿ, ಶಿವಕುಮಾರ ಪೆದ್ದಿ, ಲಿಂಗರಾಜ ದೊಡ್ಡಿ, ಸೋಮನಾಥ ಪಾಟೀಲ, ಸಂತೋಷ ದಾನಪ್ಪ, ಶಿವಶಂಕರ ಕಾರಾಮುಂಗಿ, ನಿರಂಜಯ್ಯ ಕಾವಡಿಮಠ್, ದತ್ತಾತ್ರೇಯ್ ಪಂಚಾಳ, ಚಂದ್ರಶೇಖರ ದಾನಾ,ಗಣಪತಿ ಪರತಾಪೂರೆ, ಬಸವರಾಜ ಪೆದ್ದಿ, ಉಮೇಶ ವನಂದಿ, ಕರೆಪ್ಪ ಸಿದ್ದಣ್ಣ, ಸಂಗಪ್ಪ ಮೇಳಶೆಟ್ಟಿ ಮೊದಲಾದ ಗಣ್ಯರು ಇದ್ದರು.ಶನಿವಾರ ಬೆಳಿಗ್ಗೆ ನಡೆದ ಕರಿಬಸವೇಶ್ವರ ಸ್ವಾಮಿಜಿ ರಥೋತ್ಸವದಲ್ಲಿ ಹುಡಗಿ ಮಾತ್ರವಲ್ಲದೇ ಬೀದರ್ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ರಥಕ್ಕೆ ಕಾರಿಕು, ಬದಾಮು, ಬಾಳೆಹಣ್ಣು, ಕಲ್ಲುಸಕ್ಕರೆ ಎಸೆದು ಭಕ್ತಿ ಸೇವೆ ಸಲ್ಲಿಸಿ, ಸ್ವಾಮಿಜಿ ದರ್ಶನ ಪಡೆದು ಕೃತಾರ್ಥರಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.