ಹುಡಗಿ ಸ್ವಾಮೀಜಿಗೆ ಭವ್ಯ ಸ್ವಾಗತ

ಬುಧವಾರ, ಜೂಲೈ 17, 2019
26 °C

ಹುಡಗಿ ಸ್ವಾಮೀಜಿಗೆ ಭವ್ಯ ಸ್ವಾಗತ

Published:
Updated:

ಹುಮನಾಬಾದ್: ಲೋಕಕಲ್ಯಾಣಾರ್ಥ ಅಮರನಾಥ ಹಾಗೂ ವೈಷ್ಣವದೇವಿ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡು ಭಾನುವಾರ ಸ್ವ-ಗಾಮಕ್ಕೆ ಮರಳಿದ ತಾಲ್ಲೂಕಿನ ಹುಡಗಿ ಹಿರೇಮಠದ ವೀರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭಕ್ತರು ಭಾನುವಾರ ಅಡ್ಡಪಲ್ಲಕ್ಕಿ ಮೂಲಕ ಸ್ವಾಗತ ಕೋರಿದರು.ಗ್ರಾಮದ ಪ್ರಮುಖ ಬೀದಿಗಳ ಮೂಲಕ ಹೊರಟ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ 101 ಮಾತೆಯರು ತುಂಬಿದ ಕಳಶಹೊತ್ತ ಶೋಭಾಯಾತ್ರೆ ನಡೆಸಿದರು.

ಮಕ್ಕಳು, ಗಣ್ಯರು ಭಾಗವಹಿಸಿ, ಮೆರವಣಿಗೆ ಮೆರಗು ಹೆಚ್ಚಿಸಿದ್ದರು. ಪಲ್ಲಕ್ಕಿ ಶ್ರೀಮಠಕ್ಕೆ ತಲುಪಿದ ನಂತರ ಭಕ್ತಾದಿಗಳು ಶ್ರೀಗಳ ತುಲಾಭಾರ ಮೂಲಕ ಭಕ್ತಿಸೇವೆ ಸಲ್ಲಿಸಿದರು. ತಾಲ್ಲೂಕಿನ ಇಟಗಾ ಯೋಗಾಶ್ರಮ ಬಾಲಯೋಗಿ ಚನ್ನಲ್ಲೇಶ್ವರ ಸ್ವಾಮೀಜಿ, ಸದಲಾಪೂರ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಸ್ಥಾನ ಸದ್ಭಭಕ್ತರಾದ ಶಿವಾನಂದ ಉಳ್ಳಾಗಡ್ಡೆ, ರಾಜಕುಮಾರ ಧುಮ್ಮನಸೂರ, ಸೋಮನಾಥ ಪಾಟೀಲ,  ಗುರಪ್ಪ ಉಡುಮನಳ್ಳಿ, ಸಂಗಪ್ಪ ಮೇಲಶೆಟ್ಟಿ, ಕರಿಬಸಯ್ಯಸ್ವಾಮಿ, ಮಲ್ಲಿಕಾರ್ಜುನ ಮೂಲಗಿ, ಬಸವರಾಜ ಮುತ್ತಂಗಿ, ಶ್ರೀಧರ, ಸಂಗಪ್ಪ ಖನಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry