ಶುಕ್ರವಾರ, ನವೆಂಬರ್ 22, 2019
25 °C

ಹುಡುಗ್ರು ಹಿಂಗೂ ಆಡ್ತಾರೆ

Published:
Updated:

ಸಿ.ಎಚ್. ಅಕುಲಾ ಅವರು `ಏನ್ ಹುಡುಗ್ರೋ... ಯಾಕ್ಹಿಂಗಾಡ್ತಾರೋ?'(ಏ.04) ಅನ್ನೋ ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ಹುಡುಗರ ಪರವಾಗಿ ಉತ್ತರಿಸುವ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ. ಮೊದಲನೆಯದಾಗಿ `ಎಲ್ಲಾ ಹುಡುಗರೂ ಹಾಗಲ್ಲ, ನವಿರು ಮನಸ್ಸಿನ ಹುಡುಗರೂ ಇರುತ್ತಾರೆ' ಎಂದ ನಿಮ್ಮ ಗೆಳತಿಗೆ ಧನ್ಯವಾದಗಳು.ಮಾನ್ಯ ಅಕುಲಾ ನೀವು ಮಾಡಿದ ಮೊದಲನೇ ತಪ್ಪು ಏನೆಂದರೆ ನಿಮ್ಮ ಗೆಳತಿಯ ಪುಸ್ತಕವನ್ನು ಕದ್ದು ನೋಡಿದ್ದು. ಅದು ನೀವಿಬ್ಬರೂ ಗೆಳತಿಯರ ವಿಚಾರ ಅದರ ಬಗ್ಗೆ ಹೆಚ್ಚಿನದ್ದೇನೂ ನಾನು ಹೇಳುವುದಿಲ್ಲ. ಆದರೆ ನೀವು ಹುಡುಗಿಯರದ್ದು ಕವಿ ಹೃದಯ, ಹುಡುಗರದ್ದು ಕಪಿ ಹೃದಯ ಎಂದಿದ್ದೀರಿ. ಭಾರತದಲ್ಲಿ ಕವಿಗಳು ಹೆಚ್ಚಿದ್ದಾರೋ ಕವಯಿತ್ರಿಯರೋ? ನನ್ನ ಪ್ರಕಾರ ಕವಿಗಳ ಸಂಖ್ಯೆ ಖಂಡಿತವಾಗಿಯೂ ಕವಯಿತ್ರಿಯರಿಗಿಂತ ಹೆಚ್ಚು. ಅಂದ ಮೇಲೆ ಪ್ರೀತಿಸೋರಲ್ಲಿ ಹೆಚ್ಚಿನವರು ಹುಡುಗರು ಎಂದಾಯಿತಲ್ಲವೇ?ಆ ಹುಡುಗ ಆರಾಮವಾಗಿ ಜಿಮ್‌ಗೆ ಹೋಗಿ ಮೈಮುರಿಯುವ ಹಾಗೆ ವ್ಯಾಯಾಮ ಮಾಡಿ ರಾತ್ರಿ ಆರಾಮವಾಗಿ ನಿದ್ರೆ ಮಾಡ್ತಾ ಇದ್ದ. ಆದರೆ ನಿಮ್ಮ ಗೆಳತಿ ಮಾಡಿದ್ದೇನು? ಅವನ ಸಕ್ಕರೆ ನಿದ್ರೆಯನ್ನು ಹಾಳು ಮಾಡಿದ್ದು. ಅಷ್ಟರ ಮೇಲೆ ಅವನು ಕಷ್ಟಪಟ್ಟು ಬೆವರು ಸುರಿಸಿ ಸಾಮು ಮಾಡಿದ್ದನ್ನು ಹೇಳಬಾರದು ಎಂಬ ಒಕ್ಕಣೆ ಬೇರೆ. ಹುಡುಗಿಯರು ತಾವು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದನ್ನು, ಫೇಸ್‌ಪ್ಯಾಕ್ ಮಾಡಿಸಿಕೊಂಡದ್ದನ್ನು, ಮಾಡಿಕೊಂಡದ್ದನ್ನು ಎಲ್ಲಾ ಕೊರೆಯಬಹುದೇ?ಇನ್ನೊಂದು ವಿಚಾರ ಇದೆ. ಹುಡುಗ ತುಂಬಾ ಡೀಸೆಂಟಾಗಿದ್ದರೆ ನೀವು ಫ್ಯಾಮಿಲಿ ಪ್ಯಾಕ್ ಎಂದು ಛೇಡಿಸುತ್ತೀರಿ. ನಿಮ್ಮ ಕನಸಿನ ಹುಡುಗರಾದ ಸಲ್ಮಾನ್ ಖಾನ್, ಹೃತಿಕ್ ರೋಷನ್ ತರಾ ನಾವೂ ಸಿಕ್ಸ್ ಪ್ಯಾಕ್ ಮಾಡಿಕೊಳ್ಳೋಕೆ ಹೊರಡೋದು ಅದು ಹೇಗೆ ತಪ್ಪಾಗುತ್ತೆ? ಇಷ್ಟೆಲ್ಲಾ ತಲೆಕೆಡಿಸಿಕೊಂಡು ಬರೆದಿದ್ದೀರಲ್ಲಾ ನೀವು ಏನಾದ್ರೂ ನಿಮ್ಮ ಫ್ರೆಂಡ್ ತರಾನೇ ಲವ್ವಲ್ಲಿ ಬಿದ್ದಿದ್ದೀರಾ ಅನ್ನೋ ಪ್ರಶ್ನೆನೂ ಇಲ್ಲಿದೆ. ಆದರೆ ಆ ಪ್ರಶ್ನೇನಾ ನಾನಿಲ್ಲಿ ಕೇಳಲ್ಲ.                                               

                                                            

ಪ್ರತಿಕ್ರಿಯಿಸಿ (+)