ಸೋಮವಾರ, ಜೂನ್ 21, 2021
30 °C

ಹುಡುಗ, ಹುಡುಗಿಯರ ಮಿದುಳಿನಲ್ಲಿ ವ್ಯತ್ಯಾಸವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌(ಐಎಎನ್‌ಎಸ್‌): ಹುಡುಗ ಹಾಗೂ ಹುಡುಗಿ­ಯರಲ್ಲಿ ಯಾರು ಹೆಚ್ಚು ಜಾಣರು?... ಅನೇಕ ವರ್ಷ­ಗಳಿಂದ ಚರ್ಚೆಯಲ್ಲಿರುವ ಈ ಪ್ರಶ್ನೆಗೆ ಬ್ರಿಟನ್‌ನ ಬರ್ಮಿಂಗ್‌­ಹ್ಯಾಮ್‌ನ ಆಷ್ಟನ್‌ ವಿಶ್ವವಿದ್ಯಾಲಯದ ಪ್ರಾಧ್ಯಾ­ಪಕ,  ನರತಜ್ಞ  ಗಿನಾ ರಿಪ್ಪನ್‌ ಉತ್ತರ ನೀಡಿದ್ದಾರೆ. ‘ಗಂಡಸರು ಮಂಗಳ ಗ್ರಹದಿಂದ ಬಂದವರು, ಮಹಿಳೆಯರು ಶುಕ್ರಗ್ರಹ­ದಿಂದ ಬಂದವರು’ ಎಂಬ ಸಿದ್ಧಾಂತಕ್ಕೆ ಯಾವುದೇ ವೈಜ್ಞಾನಿಕ ಆಧಾರ­­ಗಳಿಲ್ಲ.  ಹುಡುಗ ಹಾಗೂ ಹುಡುಗಿಯರ  ಮಿದುಳು ರಚನೆಯಲ್ಲಿ ಯಾವುದೇ ವ್ಯತ್ಯಾಸ­ವಿರು­ವು­ದಿಲ್ಲ’ ಎಂದು ಗಿನಾ ರಿಪ್ಪನ್‌ ಸ್ಪಷ್ಟಪಡಿಸಿದ್ದಾರೆ.‘ಪ್ರಪಂಚದಲ್ಲಿ ಲಿಂಗ ಅಸಮಾನತೆ­ಯಿ­ರು­­­­­ವು­ದರಿಂದ ಮಹಿಳೆಯರು ಹಾಗೂ ಪುರುಷರ ನಡುವೆ ಅಗಾಧ ವ್ಯತ್ಯಾಸ­­­ವಿದೆ. ಅಸ್ಥಿಪಂಜರವನ್ನು ನೋಡಿ ಅದರ ಲಿಂಗವನ್ನು ಗುರುತಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಿದುಳನ್ನು ನೋಡಿ ಸಹ ಹುಡುಗನದು ಅಥವಾ ಹುಡುಗಿಯದು ಎಂದು ಗುರುತಿಸ­ಲಾಗು­ವು­ದಿಲ್ಲ’ ಎಂದಿದ್ದಾರೆ.  ‘ಇನ್ನು ಮಕ್ಕಳಿಗೆ ಅವರ ಲಿಂಗಕ್ಕೆ ಅನುಗುಣವಾಗಿ ಪೋಷ­ಕರು ಗೊಂಬೆ­ಗಳನ್ನು ನೀಡುತ್ತಾರೆ. ಈ ಮೂಲಕ ಅವರಲ್ಲಿ ಲಿಂಗ ವ್ಯತ್ಯಾಸ­ವನ್ನು ಮೂಡಿಸ­ಲಾಗುತ್ತದೆ’ ಎಂದು ರಿಪ್ಪನ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.