ಭಾನುವಾರ, ಜೂನ್ 13, 2021
28 °C

ಹುಡುಗ ಹುಡುಗಿಯಾಗುವ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮ­ದಲ್ಲಿ ಶನಿವಾರ ಸಡಗರವೋ ಸಡಗರ. ಊರ ದೇವತೆಯ­ರಾದ ಮಾರಮ್ಮ ಹಾಗೂ ಲಕ್ಷ್ಮೀದೇವಮ್ಮನ ಜಾತ್ರೆ­ಯನ್ನು ವಿಶಿಷ್ಟ­ವಾಗಿ ಆಚರಿಸ­ಲಾಯಿತು.ಜಾತ್ರೆಯಲ್ಲಿ ಸಾವಿರಾರು ಪುರುಷರು ಚಿತ್ರವಿಚಿತ್ರ ವೇಷ ಧರಿಸಿ ಗಮನ ಸೆಳೆದರು. ಅವರಲ್ಲಿ ಬಹು­ಪಾಲು ಪುರುಷರು ಸ್ತ್ರೀ ವೇಷದಲ್ಲಿ ಕಂಗೊಳಿಸಿದರು. ಈ  ಜಾತ್ರೆಯಲ್ಲಿ ಮಹಿಳೆಯರು ಕುಣಿಯುವ ಹಾಗಿಲ್ಲ. ಮಾರಮ್ಮ ಹೆಣ್ಣುದೇವತೆ­ಯಾದ್ದ­ರಿಂದ ಪುರುಷರೇ ಹೆಣ್ಣಿನ ವೇಷ ಧರಿಸುತ್ತಾರೆ.ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಮನಸಿಗೆ ಬಂದಂತೆ, ಬುದ್ಧಿಗೆ ಹೊಳೆದಂತೆ, ಕಣ್ಣಿಗೆ ಕಂಡಂತೆ ವೇಷ ಧರಿಸಿ ಕುಣಿ­ಯುವುದೇ ಮುಖ್ಯ. ಬೇರಾವುದೇ ಊರಿನ ಮಾರಮ್ಮನ ಜಾತ್ರೆಯಲ್ಲಿ ಇಂಥ ವೈಶಿಷ್ಟ್ಯ, ವೈಚಿತ್ರ್ಯ ಸಿಗುವುದಿಲ್ಲ. ಪ್ರತಿ­ಯೊಬ್ಬರದೂ ಕುಚೋದ್ಯ ಅನ್ನಿಸು­ವಂಥ ವೇಷ, ಕೈಯಲ್ಲಿ ಕೋಲು. ಮೈಕಿನಲ್ಲಿ ಕೇಳಿಸುವ ‘ಮಾರಮ್ಮನ ಸ್ತುತಿ’ಗೆ ತಕ್ಕಂತೆ ತಮಟೆ ಸದ್ದು. ಅದನ್ನು ಅನುಸರಿಸಿ ಎಲ್ಲ ವೇಷಧಾರಿ­ಗಳೂ ದೇವಸ್ಥಾನವನ್ನು ಸುತ್ತುತ್ತ ಹೆಜ್ಜೆ ಹಾಕುತ್ತಾರೆ. ಈ ಗಾಯನ, ವಾದ್ಯ, ಕುಣಿತ ಕೂಡ ಅಪರೂಪ.ಏನಿದರ ವೈಶಿಷ್ಟ್ಯ?: ರಮ್ಮನ­ಹಳ್ಳಿ­ಯಲ್ಲಿ ನೂರಾರು ವರ್ಷಗಳಿಂದ ಮಾರಮ್ಮನ ಹಬ್ಬ ಆಚರಿಸುತ್ತಿದೆ. ಸುಮಾರು ಮೂರು ದಶಕಗಳಿಂದ ಈಚೆಗೆ ಈ ರೀತಿ ವಿಚಿತ್ರ ವೇಷ ತೊಟ್ಟು ಕುಣಿಯುವ ಸಂಪ್ರದಾಯ ಆಚರಣೆ­ಯಲ್ಲಿದೆ. ವೇಷ ತೊಡುವವರು ಮುಂಚಿತ­ವಾಗಿಯೇ ಹರಕೆ ಬೇಡಿ­ಕೊಂಡಿ­ರುತ್ತಾರೆ. ಅದರಂತೆ ಜಾತ್ರೆಯ ದಿನ ಆಯಾ ವೇಷದಲ್ಲಿ ಕುಣಿದು ಮಾರಮ್ಮನನ್ನು ಸಂತೋಷ­ಪಡಿಸು­ತ್ತಾರೆ.15 ದಿನಗಳವರೆಗೆ ನಡೆಯುವ ಈ ಹಬ್ಬದ ಸಂದರ್ಭದಲ್ಲಿ ಯಾರೂ ಮಾಂಸಾಹಾರ ಸೇವಿಸು­ವಂತಿಲ್ಲ, ಮದ್ಯ ಕುಡಿಯುವಂತಿಲ್ಲ. ಕುರಿ, ಕೋಣಗಳ ಬಲಿಗೆ ಹೆಸರಾಗಿದ್ದ ಮಾರಮ್ಮನ ಜಾತ್ರೆ ಈ ಗ್ರಾಮದಲ್ಲಿ ಮಾತ್ರ ಅತ್ಯಂತ ವಿಶಿಷ್ಟವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.