ಸೋಮವಾರ, ಮಾರ್ಚ್ 8, 2021
24 °C

ಹುಣಸಗಿ ಬಸ್ ನಿಲ್ದಾಣಕ್ಕೆ ಶಾಸಕರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ ಬಸ್ ನಿಲ್ದಾಣಕ್ಕೆ ಶಾಸಕರ ಭೇಟಿ

ಹುಣಸಗಿ: ಪಟ್ಟಣದಲ್ಲಿ ಆಮೆಗತಿ­ಯಲ್ಲಿ ನಡೆದಿರುವ ಬಸ್ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿದರು.ಕಾಮಗಾರಿ ನಿಧಾನಗತಿಯಲ್ಲಿ ನಡೆ­ದಿ­ರು­ವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕೆಲವೇ ದಿನಗಳಲ್ಲಿ ಬೇಸಿಗೆ ಪ್ರಾರಂಭ­ವಾಗ­ಲಿದ್ದು, ಪ್ರಯಾಣಿಕರಿಗೆ ತೊಂದರೆ­ಯಾ­ಗ­­ಲಿದೆ. 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.ಮಳೆ ನೀರು ಸರಾಗವಾಗಿ ಹರಿದು ಹೋಗಲು ಮತ್ತು ಬಸ್ ನಿಲ್ದಾಣ­ದೊಳಗೆ ಪ್ರವೇಶಿಸದಂತೆ ನಿಲ್ದಾಣದ ಸುತ್ತ ಚರಂಡಿ ನಿರ್ಮಿಸಲು ತಿಳಿಸಿದರು.ಬಸ್‌ ನಿಲ್ದಾಣದ ಕಾಮಗಾರಿಯ ಕುರಿತು ಜ.31 ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ್ದು, ಬಸ್‌ ನಿಲ್ದಾಣ ಕಾಮ­ಗಾರಿ ಪರಿಶೀಲಿಸಲು ಆಗಮಿಸಿದ್ದಾಗಿ ತಿಳಿಸಿದರು.ನಿಲ್ದಾಣದ ಮೇಲ್ಛಾವಣಿ ಹಾಕಲಾ­ಗು­ತ್ತಿರುವ ತಗಡಿನ ಶೀಟ್‌ಗಳ ಗುಣ­ಮಟ್ಟ­ವನ್ನು ಪರಿಶೀಲಿಸಿ, ಅಂದಾಜು ವೆಚ್ಚದ ಮಾಹಿತಿ ಪಡೆದರು. ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವ­ಜನಿ­ಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹೇಳಿದರು.ಈಗಾಗಲೇ ಸಂಬಂಧಿಸಿದ ಗುತ್ತಿಗೆ­ದಾರರಿಗೆ ನೋಟಿಸ್ ಜಾರಿ ಮಾಡಿದ್ದು, ಫೆಬ್ರುವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣ ಗೊಳಿಸುವುದಾಗಿ ಸ್ಥಳದ­ಲ್ಲಿಯೇ ಹಾಜರಿದ್ದ ಸಾರಿಗೆ ಸಂಸ್ಥೆ ಕಾರ್ಯ ನಿರ್ವಾಹಕ ಎಂಜಿನಿಯರ್ ಮೈಬೂಬಸಾಬ ತಿಳಿಸಿದರು.ಈ ಕುರಿತು ಜ. 31ರಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ಹುಣಸಗಿ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಎಂಬ ಶೀರ್ಷಿಕೆಯ ವರದಿ ಪ್ರಕಟಿಸ­ಲಾಗಿತ್ತು.ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಮುಖಂಡರಾದ ಸೂಲಪ್ಪ ಕಮತಗಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ನಿಂಗಣ್ಣ ಸಾಹು ಬಳಿ, ಸೂಗಪ್ಪ ಚಂದಾ, ನಾನಾಗೌಡ ಪಾಟೀಲ, ಬಾಬು ಚೌದ್ರಿ, ಅಲಿಮೆಸ್ತ್ರಿ, ಬಸವರಾಜ ಮಿಲ್ಟ್ರಿ, ರವಿ ಪುರಾಣಿಕ­ಮಠ, ಖಾಜಾಹುಸೇನ ನಬೂಜಿ, ಖಾಜಾಪಟೇಲ, ಎಂಜಿನಿಯರ್‌ ಎಂ.ಎಲ್.­­ಇಂಗಳಳ್ಳಿ, ವಸಂತ ಸುರಪುರ­ಕರ್ ಸೇರಿದಂತೆ ಇತರರು ಇದ್ದರು.ನಂತರ 110 ಕೆವಿಯ ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಕಾಮಗಾರಿಯನ್ನು ಪರಿಶೀಲಿಸಿದರು.ಶಾಖಾಧಿಕಾರಿ ಶ್ರೀನಿವಾಸ ಪ್ರಸಾದ ಅವರಿಂದ ಮಾಹಿತಿ ಪಡೆದರು. ಕಾಮ­ಗಾರಿ ಸ್ಥಳದಲ್ಲಿ ಯಾರೂ ಇಲ್ಲದ್ದನ್ನು ಕಂಡು ಹಿರಿಯ ಅಧಿಕಾರಿಗಳಿಗಳಿಗೆ ತಕ್ಷಣವೇ ಮಾತನಾಡುವುದಾಗಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.