ಗುರುವಾರ , ಮೇ 13, 2021
16 °C

ಹುಣಸಿಹೊಳೆ: ವೃಂದಾವನ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ಇಂದು ವಿಪ್ರರಲ್ಲಿ ಧರ್ಮಾಚರಣೆಗಳು ಕಡಿಮೆಯಾಗುತ್ತಿವೆ. ಅದರಿಂದಾಗಿ ಒಂದು ಕಡೆ ಸಾಮಾಜಿಕವಾಗಿ, ಮಾನಸೀಕವಾಗಿ ಕುಸಿತ ಉಂಟಾಗುತ್ತದೆ. ಅದಕ್ಕಾಗಿ ನಾವು ಎಂದಿಗೂ ಧರ್ಮದಿಂದಲೇ ನಡೆಯಬೇಕೆಂದು ಹುಣಸಿಹೊಳೆ ಸಂಸ್ಥಾನ ಕಣ್ವಮಠದ ವಿದ್ಯಾಭಾಸ್ಕರ ತೀರ್ಥ ಸ್ವಾಮಿಗಳು ತಿಳಿಸಿದರು.ಹುಣಸಗಿಹೊಳೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಚತುರ್ ಯತಿವರೇಣ್ಯರ ಮೂಲ ವೃಂದಾವನಗಳ ಪುನಃ ಪ್ರತಿಷ್ಠಾಪನೆ ಮತ್ತು ಧಾಮದ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರನ್ನುದ್ದೇಶಿಸಿ ಆಶಿರ್ವಚನ ನೀಡಿದರು. ಧರ್ಮ ಮತ್ತು ಸಂಸ್ಕಾರಗಳು ನಮ್ಮನ್ನು ಎತ್ತರಕ್ಕೆ ಒಯ್ಯಬಲ್ಲವು. ನಿತ್ಯ ಸಂಧ್ಯಾವಂದನೆ ಏಕಾದಶಿ ವೃತಾಚರಣೆ ಮಾಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಅದರಂತೆ ವೃಂದಾವನಗಳ ದರ್ಶನದಿಂದ ಪುಣ್ಯ ಲಭಿಸುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಇಂದಿನ ಯುವಕರ ಮೇಲಿದೆ. ವಿಪ್ರರು ಸಮಾಜಮುಖಿಯಾಗಿ ಜೀವನ ನಡೆಸಿ ಎಂದು ತಿಳಿಸಿದರು.25 ಲಕ್ಷರೂ ವೆಚ್ಚದಲ್ಲಿ ಭಕ್ತರೇ ನಿರ್ಮಾಣ ಮಾಡಲಾಗಿದ್ದ ಕಟ್ಟಡಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಿ ಆಶಿರ್ವದಿಸಿದರು.

ಶತಮಾನಗಳಷ್ಟು ಹಿಂದಿನಿಂದಲೂ ಕಣ್ವಮಠದ ಯತಿಗಳಾದ ವಿದ್ಯಾಧೀಶ ತೀರ್ಥರು, ವಿದ್ಯಾಧೀರಾಜ ತೀರ್ಥರು, ವಿದ್ಯಾವಿಜಯ ತೀರ್ಥರು, ವಿದ್ಯಾಮನೋಹರ ತೀರ್ಥರ ಮೂಲ ವೃಂದಾವನಗಳಿದ್ದು ಅವುಗಳನ್ನು ಪುನಃ ಪ್ರತಿಷ್ಠಾಪಿಸಲಾಯಿತು.ಭಾನುವಾರ ಮತ್ತು ಸೋಮವಾರ ಎರಡು ದಿನಗಳವರೆಗೆ ದೇವತಾರ್ಚನೆ, ಪಂಚಾಮೃತ ಅಭಿಶೇಕ, ಹೋಮ, ತೀರ್ಥ, ಹಸ್ತೋದಕ ಮುಂತಾದ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ಪಂಡಿತರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮಗಳಲ್ಲಿ ಜಿಲ್ಲೆ ಸೇರಿದಂತೆ ಗುಲ್ಬರ್ಗ, ವಿಜಾಪುರ, ಬಾ ಗಲಕೋಟೆ, ಕೊಪ್ಪಳ, ರಾಯಚೂರಿಂದ ನೂರಾರು ಭಕ್ತರು ಆಗಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.