ಹುಣಸೂರು: ಪೋಲಿಯೊ ಲಸಿಕೆ ಹಾಕಲು ಸಿದ್ಧತೆ

7

ಹುಣಸೂರು: ಪೋಲಿಯೊ ಲಸಿಕೆ ಹಾಕಲು ಸಿದ್ಧತೆ

Published:
Updated:

ಹುಣಸೂರು: 192 ಗಿರಿಜನ ಮಕ್ಕಳು ಸೇರಿದಂತೆ ತಾಲೂಕಿನ 28,444 ಮಕ್ಕಳಿಗೆ ಈ ಬಾರಿ ಪೋಲಿಯೊ ಲಸಿಕೆ ಹಾಕಲಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೇವಿಕರಾಣಿ ಹೇಳಿದರು.ಪಟ್ಟಣದ ತಾ.ಆರೋಗ್ಯ ಇಲಾಖೆ ಕಚೇರಿಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿ, ಜನವರಿ 23 ಮತ್ತು ಫೆಬ್ರುವರಿ 27ರಂದು ಎರಡು ಹಂತದಲ್ಲಿ ನಡೆಯಲಿದೆ ಎಂದರು. ತಾಲೂಕಿನಲ್ಲಿ 213 ಲಸಿಕಾ ಕೇಂದ್ರ ಸ್ಥಾಪಿಸಿದ್ದು, 359 ಅಂಗನವಾಡಿ ಕಾರ್ಯಕರ್ತೆಯರು, 197 ಆಶಾ ಕಾರ್ಯಕರ್ತೆಯರು ಸರ್ಕಾರಿ ಆಸ್ಪತ್ರೆ ನೌಕರರೊಂದಿಗೆ ಭಾಗವಹಿಸಲಿದ್ದಾರೆ. 426 ತಂಡ ರಚಿಸಿದ್ದು 852 ಸಿಬ್ಬಂದಿಗಳು ಲಸಿಕೆ ಹಾಕಲು ಸಜ್ಜಾಗಿದ್ದಾರೆ.ಹುಣಸೂರು ರೋಟರಿ ಸಂಸ್ಥೆ ಬಸ್ ನಿಲ್ದಾಣದಲ್ಲಿ ಕೇಂದ್ರ ತೆರೆದು ಪ್ರಯಾಣಿಕರ ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.ಹಾಡಿಗಳಿಗೆ ಕಡ್ಡಾಯ: ತಾಲೂಕಿನ ಹಾಡಿಗಳಿಗೆ ಪಲ್ಸ್ ಪೊಲೀಯೊ ಲಸಿಕಾ ತಂಡ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಬೇಕು. ಇದಕ್ಕಾಗಿ ತಾಲೂಕಿನಲ್ಲಿ 17 ಪ್ರತ್ಯೇಕ ಮೊಬೈಲ್ ಘಟಕವನ್ನು ಸ್ಥಾಪಿಸಲಾಗಿದೆ.ಊಟದ ವ್ಯವಸ್ಥೆ: ತಾಲೂಕಿನಾದ್ಯಂತ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಆ ದಿನ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಪಾಪಣ್ಣ ಹೇಳಿದರು.

 

ಅಧಿಕಾರಿಗಳು ಗೈರು: ತಾಲೂಕು ಕೇಂದ್ರದಲ್ಲಿ 27 ತಾಲೂಕು ಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ, ಮಂಗಳವಾರ ಕರೆದಿದ್ದ ರಾಷ್ಟ್ರೀಯ ಕಾರ್ಯಕ್ರಮ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಕೇವಲ 7 ಅಧಿಕಾರಿಗಳು ಉಪಸ್ಥಿತರಿದ್ದರು. ಉಳಿದಂತೆ 20 ಅಧಿಕಾರಿಗಳು ಸಭೆಗೆ ಗೈರು  ಹಾಜರಿದ್ದರು. 

ತಹಶೀಲ್ದಾರ್ ಲೋಕನಾಥ್, ಡಾ.ಶಿವಣ್ಣ, ಸಿ.ಟಿ.ಆರ್.ಐ. ಅಧಿಕಾರಿ ಪಾಂಡುರಂಗರಾವ್, ಕೃಷ್ಣೇಗೌಡ, ಜವರೇಗೌಡ ಮತ್ತು ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry