ಸೋಮವಾರ, ಏಪ್ರಿಲ್ 19, 2021
25 °C

ಹುತಾತ್ಮರ ದಿನಾಚರಣೆ: ಮೊಂಬತ್ತಿ ಮೆರವಣಿಗೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಅಮರ ಕ್ರಾಂತಿಕಾರಿಗಳಾದ ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವರ ಬಲಿದಾನ ಸ್ಮರಣಾರ್ಥ ನಗರದ ಯುನೈಟೆಡ್ ಇಂಡಿಯನ್ ವಾರಿಯರ್ಸ್ ವತಿಯಿಂದ ಬುಧವಾರ(ಮಾ.23) 80ನೇ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.  ಬಸವೇಶ್ವರ ಕಾಲೇಜು ಆವರಣದಲ್ಲಿರುವ ಬೀಳೂರ ಅಜ್ಜನ ದೇವಸ್ಥಾನ ಬಳಿಯಿಂದ ಸಂಜೆ 6.45ಕ್ಕೆ ಹುತಾತ್ಮರ ಭಾವಚಿತ್ರಗಳೊಂದಿಗೆ ಬೃಹತ್ ಮೇಣದಬತ್ತಿ ಮೆರವಣಿಗೆ ನಡೆಯಲಿದೆ.ಮೆರವಣಿಗೆಯು ಬಸವೇಶ್ವರ ವೃತ್ತದ ಮೂಲಕ ವಲ್ಲಭಭಾಯಿ ಚೌಕಗೆ ತೆರಳಲಿದ್ದು, ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಬ್ರಿಟಿಷ್‌ರಿಂದ ಭಾರತಮಾತೆಯನ್ನು ಸ್ವತಂತ್ರಗೊಳಿಸಲು ಪಣತೊಟ್ಟು ಕ್ರಾಂತಿಕಾರಿ ಹೋರಾಟ ಆರಂಭಿಸಿದ ಭಗತ್‌ಸಿಂಗ್, ರಾಜಗುರು ಹಾಗೂ ಸುಖದೇವ ಅವರು ಮಾರ್ಚ್ 23, 1931 ಅಂದರೆ 80 ವರ್ಷಗಳ ಹಿಂದೆ ಲಾಹೋರದ ಜೈಲಿನಲ್ಲಿ ನಗು ನಗುತ ನೇಣುಗಂಬ ಏರಿದ್ದರು.ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬ ಏರಿದ ಅಮರ ಕ್ರಾಂತಿಗಳ ಸ್ಮರಣೆಗಾಗಿ ಮೇಣದಬತ್ತಿಗಳ ಮೆರವಣಿಗೆ ಆಯೋಜಿಸಲಾಗಿದ್ದು, ಪ್ರತಿಯೊಬ್ಬ ದೇಶಭಕ್ತರು ಇದರಲ್ಲಿ ಭಾಗವಹಿಸಬೇಕು ಎಂದು ಯುನೈಟೆಡ್ ಇಂಡಿಯನ್ ವಾರಿಯರ್ಸ್‌ನ ಡ್ಯಾನಿಯಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.