ಹುತಾತ್ಮ ಯೋಧರಿಗೆ ನಾಳೆ ಶ್ರದ್ಧಾಂಜಲಿ

7

ಹುತಾತ್ಮ ಯೋಧರಿಗೆ ನಾಳೆ ಶ್ರದ್ಧಾಂಜಲಿ

Published:
Updated:

ಬೆಂಗಳೂರು: ಒನ್ ಇಂಡಿಯಾ ಸಂಸ್ಥೆಯು ಭಾನುವಾರ (ಫೆ. 5) ಸಂಜೆ 5.30ಕ್ಕೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ನೆಹರೂ ತಾರಾಲಯದ ಯುದ್ಧ ಸ್ಮಾರಕದಲ್ಲಿ ಆಯೋಜಿಸಿದೆ.ಮಾಜಿ ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವ ಆರ್. ಅಶೋಕ ಅವರು ಹುತಾತ್ಮ ಯೋಧರ ಕುಟುಂಬಗಳಿಗೆ ಧನಸಹಾಯ ನೀಡಲಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ದೇಶಭಕ್ತಿಗೀತೆ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry