ಹುತ್ತಿನ ಯಲ್ಲಮ್ಮದೇವಿ ಮಹಾರಥೋತ್ಸವ

7

ಹುತ್ತಿನ ಯಲ್ಲಮ್ಮದೇವಿ ಮಹಾರಥೋತ್ಸವ

Published:
Updated:

ಸಿರುಗುಪ್ಪ: ತಾಲ್ಲೂಕಿನ ರಾರಾವಿ ಗ್ರಾಮದ ಹುತ್ತಿನ ಯಲ್ಲಮ್ಮದೇವಿಯ ಮಹಾರಥೋತ್ಸವವು ಭಾರತ ಹುಣ್ಣಿಮೆಯ ಮಂಗಳವಾರ ಸಂಜೆ ಸಾವಿರಾರು ಭಕ್ತ ಸಾಗರದ ನಡುವೆ ಸಡಗರ ಸಂಭ್ರಮದಿಂದ ನಡೆಯಿತು.

ರಥೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜಾ ವಿಧಿ ವಿಧಾನ ಗಳನ್ನು ಮತ್ತು ಕುಂಭೋತ್ಸವ ನೆರವೇರಿಸಲಾಯಿತು.ಸಂಜೆ ದೇವಿಯ ಉತ್ಸವ ಮೂರ್ತಿ ಯನ್ನು ಹಸಿರು ತೋರಣಗಳಿಂದ ಶೃಂಗರಿಸಿದ ತೇರಿನಲ್ಲಿ ಪ್ರತಿಷ್ಟಾಪಿಸಿದ ನಂತರ ಭಕ್ತರು ಹಗ್ಗವನ್ನು ಹಿಡಿದು ದೇವಿಯ ಜಯಘೋಷಣೆ ಮಾಡುತ್ತಾ ರಥವನ್ನು ಎಳೆಯುವುದರ ಮೂಲಕ ರಥಕ್ಕೆ ಹೂ ಹಣ್ಣುಗಳನ್ನು ಎಸೆದು ಭಕ್ತಿಯ ಹರಕೆಯನ್ನು ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು.ಬಣ್ಣ ಬಣ್ಣದ ಧ್ವಜಗಳು, ದೇವಿಯ ವಿಶ್ವರೂಪದ ಗೊಂಬೆಗಳು ಹಾಗೂ ಪುಷ್ಪಮಾಲೆಗಳಿಂದ ಅಲಂಕಾರ ಮಾಡಿದ ಭವ್ಯವಾದ ರಥ ಜನಮನ ಸೂರೆಗೊಂಡಿತ್ತು.ದೇವಿಯ ದರ್ಶನಕ್ಕೆ ಬೆಳಿಗ್ಗೆ ಯಿಂದಲೇ ಅಸಂಖ್ಯಾತ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದು ಕೊಂಡರು.

ದೇವಿಯ ಪಲ್ಲಕ್ಕಿ ಉತ್ಸವ, ದೈವದ ಕುಂಭೋತ್ಸವ ಮತ್ತು ಲಂಕಾದಹನ, ಜೋಡು ಕುಂಭೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ದವು. ಮಹಿಳೆಯರು ತಮ್ಮ ಹರಕೆ ಗಳನ್ನು ಸಲ್ಲಿಸಿದರು.  ತಾಲ್ಲೂಕಿನಾದ್ಯಂತ ಸುತ್ತಮುತ್ತ ಲಿನ 50ಕ್ಕೂ ಅಧಿಕ ಹಳ್ಳಿಗಳಿಂದ ಆಗಮಿಸಿದ್ದ ಭಕ್ತಾದಿಗಳು ದೇವಿಯ ದರ್ಶನ ಪಡೆದು ವಿನೀತ ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಇಂದಿನಿಂದ ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಜಾನುವಾರುಗಳ ಪ್ರದರ್ಶನ, ಎತ್ತು ಹಾಗೂ ಬಂಡಿಗಳ ಪರುಷ ಮತ್ತು ಮಾರಾಟ,  ಸುಪ್ರಸಿದ್ದ ಸಿಹಿತಿಂಡಿಗಳ ಅಂಗಡಿಗಳು ಮತ್ತು ಮಕ್ಕಳ ಆಟಿಕೆ ಸಾಮಾನುಗಳು ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry