ಗುರುವಾರ , ನವೆಂಬರ್ 14, 2019
19 °C

ಹುದ್ದೆ ತೆರವುಗೊಳಿಸಲು ಸೂಚನೆ

Published:
Updated:

ನವದೆಹಲಿ (ಪಿಟಿಐ): ವಯೋಮಿತಿ ಮೀರಿದರೂ ಭಾರತ ಪ್ಯಾರಾಲಿಂಪಿಕ್ ಸಂಸ್ಥೆಯ (ಪಿಸಿಐ) ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿಯೇ ಮುಂದುವರಿದ ರತನ್ ಸಿಂಗ್ ಅವರಿಗೆ ಹುದ್ದೆ ತೆರವುಗೊಳಿಸುವಂತೆ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ನೋಟಿಸ್ ಜಾರಿ ಮಾಡಿದೆ.`2010ರ ಕ್ರೀಡಾ ನೀತಿಯ ಪ್ರಕಾರ 70ಕ್ಕೂ ಅಧಿಕ ವರ್ಷದವರು ಕ್ರೀಡಾ ಆಡಳಿತದಲ್ಲಿ ಇರಬಾರದು ಎನ್ನುವ ನಿಯಮವಿದೆ.ರತನ್ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ತಮ್ಮ ಸ್ಥಾನವನ್ನು ಅವರು ತೆರವು ಮಾಡಬೇಕು' ಎಂದು ಕ್ರೀಡಾ ಸಚಿವಾಲಯ ರತನ್ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ.ಈ ನೋಟಿಸ್‌ನ ಪ್ರತಿಯನ್ನು ಪಿಸಿಐ ಅಧ್ಯಕ್ಷ ಸುಲ್ತಾನ್ ಅಹಮದ್ ಅವರಿಗೆ ಫೆಬ್ರುವರಿಯಲ್ಲಿಯೇ ಕಳುಹಿಸಿಕೊಟ್ಟಿದೆ. ಈ ಕುರಿತು ಪಿಸಿಐ ಎರಡು ತಿಂಗಳ ಹಿಂದೆ ರತನ್ ಅವರಿಗೆ ಷೋಕಾಸ್ ನೋಟಿಸ್ ನೀಡಿತ್ತು. ಕ್ರೀಡಾ ಸಚಿವಾಲಯದ ಈ ಕ್ರಮವನ್ನು ಪಿಸಿಐ ಸ್ವಾಗತಿಸಿದೆ.

ಪ್ರತಿಕ್ರಿಯಿಸಿ (+)