ಬುಧವಾರ, ಜೂನ್ 23, 2021
22 °C

ಹುದ್ದೆ ತ್ಯಜಿಸಿದ ಕೃಪಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಪಟ್ನಾ (ಪಿಟಿಐ): ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗದ ಕಾರಣ ರಾಂಕೃಪಾಲ್‌ ಯಾದವ್‌ ಅವರು ಶನಿವಾರ ಆರ್‌ಜೆಡಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಎಲ್ಲ ಪ್ರಮುಖ ಸ್ಥಾನಗಳನ್ನು ತ್ಯಜಿಸಿದ್ದಾರೆ.‘ಆರ್‌ಜೆಡಿ ಕುಟುಂಬ ರಾಜಕಾರಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದೆ. ನಾನು ಪಕ್ಷದ ಪ್ರಮುಖ ಹುದ್ದೆಗಳಿಂದ ಹಿಂದೆ ಸರಿದಿದ್ದು, ಈಗ ರಾಜಕಾರಣದ ಎಲ್ಲ ಆಯ್ಕೆಗಳು ಮುಕ್ತವಾಗಿವೆ’ ಎಂದು ಕೃಪಾಲ್‌ ಹೇಳಿದ್ದಾರೆ.ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪುತ್ರಿ ಮೀಸಾ ಭಾರತಿ ಅವರಿಗೆ ಪಾಟಲೀಪುತ್ರದಿಂದ ಟಿಕೆಟ್ ನೀಡಿದ್ದಕ್ಕೆ ಮನನೊಂದ ಕೃಪಾಲ್‌, ಇದನ್ನು ವಿರೋಧಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಅವರು ಪಕ್ಷವನ್ನು ತ್ಯಜಿಸಿಲ್ಲ.ಮೀಸಾ ರಾಜಕೀಯ ತಂತ್ರ:  ಶುಕ್ರವಾರ ಕೃಪಾಲ್‌ ಅವರನ್ನು ಭೇಟಿಯಾಗಲು ಮೀಸಾ ಪ್ರಯತ್ನಿಸಿದ್ದರು. ಆದರೆ ಮೀಸಾ ಅವರ ಈ ಪ್ರಯತ್ನವನ್ನು ‘ರಾಜಕೀಯ ತಂತ್ರ’, ‘ನಾಟಕ’, ‘ಭಾವನಾತ್ಮಕ ಬ್ಲ್ಯಾಕ್‌­ಮೇಲ್‌’ ಎಂದು ಕೃಪಾಲ್‌ ಕುಟುಕಿದ್ದರು.ಮೀಸಾ ತಿರುಗೇಟು

‘ನಾನು ಕೃಪಾಲ್‌ ಅವರನ್ನು ಭೇಟಿ ಮಾಡಿ, ಪಾಟಲೀ­ಪುತ್ರ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಲು ಬಯಸಿದ್ದೆ. ಆದರೆ, ನನ್ನ ಈ ಪ್ರಾಮಾಣಿಕ ಪ್ರಯತ್ನವನ್ನು ‘ನಾಟಕ’ ಎಂದು ನನಗೆ ಅವಮಾನ ಮಾಡಿದ್ದಾರೆ’ ಎಂದು ಮೀಸಾ ಆರೋಪಿಸಿದ್ದಾರೆ.ಅಲ್ಲದೇ, ‘ಈಗ ಯಾವುದೇ ಕಾರಣಕ್ಕೂ ನನ್ನ ಉಮೇದುವಾರಿಕೆ­ಯನ್ನು ಹಿಂಪಡೆಯುವುದಿಲ್ಲ. ನಾನು ಪಾಟಲೀಪುತ್ರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.ಕೃಪಾಲ್‌ ಅವರ ನಿರ್ಧಾರದ ಕುರಿತು ಮಾತನಾಡಲು ನಿರಾಕರಿಸಿದ ಅವರು, ‘ನಾನು ಪಕ್ಷದ ಮುಖ್ಯಸ್ಥೆ ಅಲ್ಲ. ಈ ವಿಚಾರವಾಗಿ ಹಿರಿಯರು ಕ್ರಮ ಕೈಗೊಳ್ಳುತ್ತಾರೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.