ಹುನಗುಂದ ತಾಪಂಗೆ ಭೀಮಪ್ಪ ನೂತನ ಅಧ್ಯಕ್ಷ

7

ಹುನಗುಂದ ತಾಪಂಗೆ ಭೀಮಪ್ಪ ನೂತನ ಅಧ್ಯಕ್ಷ

Published:
Updated:

ಹುನಗುಂದ: ತಾಲ್ಲೂಕು ಪಂಚಾ­ಯ್ತಿ ನೂತನ ಅಧ್ಯಕ್ಷರಾಗಿ ಕೂಡಲ­ಸಂಗಮ ಕ್ಷೇತ್ರದ ಭೀಮಪ್ಪ ಸಂಗಪ್ಪ ಭಜಂತ್ರಿ ಮತ್ತು ಉಪಾಧ್ಯಕ್ಷೆ­ಯಾಗಿ ಐಹೊಳೆ ಕ್ಷೇತ್ರದ ಬಸವ್ವ ಬಾಲಪ್ಪ ಕಬ್ಬರಗಿ ಅವಿರೋಧವಾಗಿ ಸೋಮವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಬಾಗಲಕೋಟೆ ಉಪ ವಿಭಾಗಾ­ಧಿಕಾರಿ ಡಾ.ಶಂಕರ ವಣಕ್ಯಾಳ ತಿಳಿಸಿದ್ದಾರೆ.ಈ ಸ್ಥಾನಗಳು ಹಿಂದಿನವರ ರಾಜೀನಾಮೆಯಿಂದ ತೆರ­ವಾಗಿ­ದ್ದವು. ಹೊಸ ಮೀಸಲಾತಿ ಅನ್ವಯ ಚುನಾವಣೆ ನಡೆಯಿತು. ತಾಪಂ ಇಒ ಆರ್.ವಿ. ತೋಟದ ಮತ್ತು ತಹಶೀಲ್ದಾರ್‌ ವೀರೇಶ ಬಿರಾದಾರ ಉಪಸ್ಥಿತರಿದ್ದರು.ಚುನಾವಣೆಗೆ ಮೊದಲು ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ ನೇತೃತ್ವ­ದಲ್ಲಿ ಸಭೆ ನಡೆದು ಅಭ್ಯರ್ಥಿಗಳನ್ನು ನಿರ್ಧರಿಸಲಾಯಿತು ಎನ್ನಲಾಗಿದೆ. ಈ ಸಭೆಯಲ್ಲಿ ಇಲಕಲ್ಲ ನಗರಸಭೆ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಜಿಪಂ ಸದಸ್ಯ ಮಹಾಂತೇಶ ನರ­ಗುಂದ, ಮಹಾಂತಪ್ಪ ಪಲ್ಲೇದ, ಗಂಗಣ್ಣ ಬಾಗೇ­ವಾಡಿ, ಗಂಗಾಧರ ದೊಡ­ಮನಿ, ಶಂಕ್ರಪ್ಪ ನೇಗಲಿ, ಚಿದಾನಂದ ಧೂಪದ, ಶೀವಾನಂದ ಕಂಠಿ, ನೀಲಪ್ಪ ತಪೇಲಿ, ಮುತ್ತಣ್ಣ ಕಲಗೋಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry