ಹುನಗುಂದ ತಾ.ಪಂಗೆ ಶಂಕ್ರಮ್ಮಅಧ್ಯಕ್ಷೆ

7

ಹುನಗುಂದ ತಾ.ಪಂಗೆ ಶಂಕ್ರಮ್ಮಅಧ್ಯಕ್ಷೆ

Published:
Updated:

ಹುನಗುಂದ: ಇಲ್ಲಿನ ತಾಲ್ಲೂಕು ಪಂಚಾಯಿತಿಗೆ ಮಂಗಳವಾರ ನಡೆದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಂಕ್ರಮ್ಮ ಭಜಂತ್ರಿ ಹಾಗೂ ಉಪಾಧ್ಯಕ್ಷರಾಗಿ ಕುಸುಮಾ ಕುಂಬಳಾವತಿ ಆಯ್ಕೆಗೊಂಡರು. ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಹದಿನಾಲ್ಕು ಸದಸ್ಯರ ಬಲವನ್ನು ಹೊಂದಿದೆ.

 

ಚುನಾವಣೆಯಲ್ಲಿ ಶಂಕ್ರಮ್ಮ ಮತ್ತು ಕುಸುಮಾ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ಅವಿರೋಧ ಆಯ್ಕೆಯನ್ನು ಚುನಾವಣೆ ಅಧಿಕಾರಿ ಪ್ರಕಟಿಸಿದರು. ಚುನಾವಣೆ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಮೆರವಣಿಗೆ ನಡೆಸಿದರು.ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ ಮಾತನಾಡಿ, ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ಇದ್ದರೂ ಹಿಂದಿನ ಅವಧಿಯಲ್ಲಿ ಶಾಸಕರ ಆಡಳಿತ ಯಂತ್ರದ ದುರೂಪಯೋಗ ಮತ್ತು ಆಮಿಷದ ಫಲವಾಗಿ ಅಧಿಕಾರ ಕೈತಪ್ಪಿತ್ತು. ಈ ಬಾರಿ ಅಂತಹ ಅಚಾತುರ್ಯಕ್ಕೆ ಅವಕಾಶ ಸಿಗಲಿಲ್ಲ ಎಂದರು.ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಮುಖಂಡ ರವಿ ಕಲಬುರ್ಗಿ ಹಾಗೂ ಜಿಪಂ ಸದಸ್ಯರ ಸಹಕಾರ ಮತ್ತು ಒಮ್ಮತದ ನಿರ್ಣಯದಂತೆ ಆಯ್ಕೆ ಮಾಡಲಾಗಿದೆ ಎಂದು ನುಡಿದರು.ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಸಿದ್ದಪ್ಪ ಹೊಸೂರ, ಮುಖಂಡರಾದ ಶೇಖರಪ್ಪ ಬಾದವಾಡಗಿ, ಎಂ.ಎಲ್.ಶಾಂತಗೇರಿ, ಗಂಗಾಧರ ದೊಡಮನಿ, ಶಂಕ್ರಪ್ಪ ನೇಗಲಿ, ರಾಜಕುಮಾರ ಬಾದವಾಡಗಿ ಇತರರು ಹಾಜರಿದ್ದರು. ಚುನಾವಣೆಯ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಪಕ್ಷದ ಮುಖಂಡರು,  ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.`ಮಾರ್ಗದರ್ಶನ ನೀಡಿ~

ಹುನಗುಂದ:
ಸಮಾಜದಲ್ಲಿ ಆಧುನಿಕತೆ ಹೆಚ್ಚಿದಂತೆ ಸಮಷ್ಠಿ ಪ್ರಜ್ಞೆಯ ಕೊರತೆಯಾಗುತ್ತಿದೆ. ಯುವಕರು ಎಲ್ಲದಕ್ಕೂ ಉದಾಸೀನತೆ ಮಾಡಬಾರದು. ವಿಧಾಯಕ ಮನಸ್ಸನ್ನು ರೂಢಿಸಿಕೊಳ್ಳಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು. ಅವರು ಸಮೀಪದ ಚಿತ್ತವಾಡಗಿಯಲ್ಲಿ ಮಂಗಳವಾರ ನಡೆದ ಸರ್ಕಾರಿ ಪಪೂ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಎ.ಜಿ. ಗೌಡರ, ಚಂದಪ್ಪ ದೇಸಾಯಿ, ನಾಗೂರ ಗ್ರಾಪಂ ಅಧ್ಯಕ್ಷ ಅನಿಲಗೌಡ ನಾಡಗೌಡ ಮತ್ತು ಸದಸ್ಯ ಗುರನಗೌಡ ಪಾಟೀಲ ಮಾತನಾಡಿದರು. ಪ್ರಭಾರ ಪ್ರಾಚಾರ್ಯ ಮಹಾಂತೇಶ ಅರಹುಣಸಿ ಅಧ್ಯಕ್ಷತೆ ವಹಿಸಿದ್ದರು. ವಿಮ ಬ್ಯಾಂಕ್ ಮಾಜಿ ನಿರ್ದೇಶಕ ವೀರಣ್ಣ ಮರಡಿ, ಗ್ರಾಪಂ ಸದಸ್ಯ ಅಮರೇಶ ಗುಂಜಿ, ಮಹಾಂತೇಶ ಕಟಾಪುರಮಠ, ರಾಮನಗೌಡ ಗೌಡರ, ಯುವ ಮುಖಂಡ ಸಿದ್ದಣ್ಣ ಗದ್ದನಕೇರಿ, ಅಶೋಕ ಸಜ್ಜನ, ಶರಣಪ್ಪ ಗೋಡಿ, ಬಸವರಾಜ ಹೊರಕೇರಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಭೀಮಪ್ಪ ಗುರಿಕಾರ ಮತ್ತು ಶೋಭಾ ಕೋರಿ ಮಾತನಾಡಿದರು.ಎ.ಎಚ್. ಮೋಮಿನ್ ಸ್ವಾಗತಿಸಿದರು. ಸಿ.ಎಂ. ಪುರಂದರೆ ಪ್ರಾರ್ಥಿಸಿದರು. ಸೌಮ್ಯ ಹಿರೇಮಠ ನಿರೂಪಿಸಿದರು. ಶರಣಪ್ಪ ಹೂಲಗೇರಿ ವಂದಿಸಿದರು. ಏಳು ದಿನಗಳ ಶಿಬಿರದಲ್ಲಿ ಕೊಳಚೆ ನಿರ್ಮೂಲನೆ, ರಸ್ತೆ ದುರಸ್ತಿ, ಆರೋಗ್ಯ ತಪಾಸಣೆ, ಪರಿಸರ ಕಾಳಜಿ, ಲಾರ್ವಾ ಸಮೀಕ್ಷೆ, ಉಪನ್ಯಾಸ, ಕಾನೂನು ಅರಿವು, ಹಾಸ್ಯ ಸಂಜೆ ನಡೆದವು. `ಯಶಸ್ಸಿನ ದಾರಿದೀಪ~

ಅಮೀನಗಡ:
ದೃಢ ನಿರ್ಧಾರ ಯಶಸ್ಸಿನ ಕೀಲಿಕೈಯಂತಿದ್ದು, ಅರ್ಪಣಾ ಭಾವದ ಯುವ ಜನತೆಯ ಕೈಯಲ್ಲಿಯೇ ದೇಶದ ಭವಿಷ್ಯವಿದೆ ಎಂದು ಮುಖ್ಯ ಶಿಕ್ಷಕ ಸಿ.ಎಂ.  ತುಂಬಗಿ ಹೇಳಿದರು. ಗೊರಜನಾಳದಲ್ಲಿ ಸೂಳೇಭಾವಿ ಸರಕಾರಿ ಪಿ.ಯು ಕಾಲೇಜಿನ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡಿದ್ಧ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಯುವ ಜನತೆ ಮತ್ತು ನೈತಿಕ ಮೌಲ್ಯಗಳು ಕುರಿತಾದ ವಿಶೇಷ ಉಪನ್ಯಾಸ ಮಾಡುತ್ತ ಇಂದ್ರಿಯ ನಿಗ್ರಹ,  ಸಂಂಸ್ಕಾರವಂತ  ಯುವಕರು ತಮ್ಮ ಜೀವನಕ್ಕೊಂದು ಹೊಸ ರೂಪ ತಂದುಕೊಳ್ಳುವಲ್ಲಿ ಸಫಲರಾಗುತ್ತಾರೆ ಎಂದರು.`ಮಹಿಳಾ ಜಾಗತಿಕ~ ವಿಷಯ ಕುರಿತು ಮಾತನಾಡಿದ ಹಿರೇಬಾದವಾಡಗಿ ಪ್ರೌಢಶಾಲೆ ಶಿಕ್ಷಕಿ ಮುರ್ತುಜಾಬೇಗಂ ಕೊಡಗಲಿ, ಕೇವಲ ಮೀಸಲಾತಿಯಿಂದ ಸಮಾನತೆ ಸಾಧ್ಯವಿಲ್ಲ  ಪುರುಷ ವರ್ಗದ ಮನೋಭಾವದಲ್ಲಿ ಬದಲಾವಣೆಯಾದಾಗ ಮಾತ್ರ ಮಹಿಳಾ ಸಮಾನತೆ ಸಾಧ್ಯ ಎಂದರು.ಶಿಕ್ಷಕ ಎಸ್.ಬಿ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಬಾಬುಗೌಡ ಪಾಟೀಲ, ಲಕ್ಷ್ಮಣ ಮಾನುಟಗಿ, ತಮ್ಮನಗೌಡ ಪಾಟೀಲ, ಶಿವನಗೌಡ ಪಾಟೀಲ, ಪರಸಪ್ಪ ಗೋಡಿ, ಯೋಜನಾಧಿಕಾರಿ ಸಿದ್ಧಲಿಂಗಪ್ಪ ಬೀಳಗಿ ಹಾಜರಿದ್ದರು.

ವೀರರಾಣಿ ಪಲ್ಲೆೀದ ಪ್ರಾರ್ಥಿಸಿದರು. ಮಲ್ಲಪ್ಪ ಹುಲ್ಯಾಳ ಸ್ವಾಗತಿಸಿದರು. ಕಾವೇರಿ ಧುತ್ತರಗಿ ವಂದಿಸಿದರು. ಮಾರುತಿ ನೆಮದಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry