ಶುಕ್ರವಾರ, ಮೇ 14, 2021
31 °C

ಹುನಗುಂದ: ರಾಷ್ಟ್ರಮಟ್ಟದ ಕಬಡ್ಡಿ 26ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಟೂರ್ನಿ ಇದೇ 26ರಿಂದ 29ರ ವರೆಗೆ ಹುನಗುಂದ ಪಟ್ಟಣದ ಸರ್ಕಾರಿ ಟಿ.ಸಿ.ಎಚ್.ಕಾಲೇಜು ಮೈದಾನದಲ್ಲಿ ನಡೆಯಲಿದೆ.ಹುನಗುಂದದ ಉದಯ ಯುವಕ ಮಂಡಳ ಮತ್ತು ಬಾಗಲಕೋಟೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಜಂಟಿ ಆಶ್ರಯದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್. ಆರೇಗೌಡರ ತಿಳಿಸಿದರು.ಪುರುಷರ ವಿಭಾಗದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ1 ಲಕ್ಷ, ದ್ವಿತೀಯ ಬಹುಮಾನ ರೂ 75 ಸಾವಿರ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ತಲಾ ರೂ 30 ಸಾವಿರ ನೀಡಲಾಗುತ್ತದೆ.

ಮಹಿಳೆಯರ ವಿಭಾಗದಲ್ಲಿ ವಿಜೇತವಾಗುವ ತಂಡಕ್ಕೆ ಪ್ರಥಮ ರೂ 75 ಸಾವಿರ, ದ್ವಿತೀಯ ರೂ 50 ಸಾವಿರ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ತಲಾ ರೂ 25 ಸಾವಿರ ನೀಡಲಾಗುತ್ತದೆ.ಭಾಗವಹಿಸುವ ಪುರುಷರ ತಂಡಗಳು:ಒಎನ್‌ಜಿಸಿ ಹರಿಯಾಣ, ಬಿಎಸ್‌ಎಫ್ ದೆಹಲಿ, ಐಸಿಎಫ್ ಚೆನ್ನೈ, ನೇವಿ ಮುಂಬೈ, ದೇನಾ ಬ್ಯಾಂಕ್ ಮುಂಬೈ, ಸೌತ್ ಸೆಂಟ್ರಲ್ ರೈಲ್ವೆ ಸಿಕಂದರಬಾದ್, ಜಮ್ಮು-ಕಾಶ್ಮೀರ, ಛತ್ತೀಸ್‌ಗಡ, ಗಾಂಧಿನಗರ ಗುಜರಾತ್, ಬಿಲಾಸ್‌ಪುರ, ಆಂಧ್ರ ಬ್ಯಾಂಕ್ ಹೈದರಾಬಾದ್ ಹಾಗೂ ರಾಜ್ಯದ ತಂಡಗಳಾದ ಎಸ್‌ಬಿಎಂ, ವಿಜಯಾ ಬ್ಯಾಂಕ್, ಕೆಎಸ್‌ಪಿ, ಕೆಪಿಟಿಸಿಎಲ್, ಆರ್‌ಡಬ್ಲ್ಯೂಎಫ್, ಎಎಸ್‌ಇ.ಮಹಿಳಾ ತಂಡಗಳು: ನಾದರ್ನ್ ರೈಲ್ವೆ ದೆಹಲಿ, ಹರಿಯಾಣ, ಸೆಂಟ್ರಲ್ ರೈಲ್ವೆ ಮುಂಬೈ, ರಾಯಪುರ ಛತ್ತೀಸಗಡ, ಸುವರ್ಣ ಯುಗ್ ಪುಣೆ, ವಾಗೇಶ್ವರಿ ಪುಣೆ, ರಚನಾ ಸ್ಪೋರ್ಟ್ಸ್ ಕ್ಲಬ್ ನಾಸಿಕ್, ವಿಶಾಖಪಟ್ಟಣ, ತಮಿಳುನಾಡು, ಗೋವಾ, ಕೇರಳ, ಶಿವಶಕ್ತಿ ರತ್ನಗಿರಿ ಹಾಗೂ ರಾಜ್ಯದ ಆಳ್ವಾಸ್ ಮೂಡಬಿದ್ರಿ, ಅಮೃತ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ಮತ್ತು ಮಾತಾ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.