ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳ 10ರಿಂದ

ಸೋಮವಾರ, ಜೂಲೈ 15, 2019
25 °C

ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳ 10ರಿಂದ

Published:
Updated:

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ  ಎಂ.ಆರ್. ಸಾಖರೆ ಶಾಲೆ ಅಂಗಳದಲ್ಲಿ ಮತ್ತು ಬಿ.ಬಿ.ಎ. ಕಾಲೇಜಿನಲ್ಲಿ  ಉದ್ಯೋಗ ಹಾಗೂ ಕೌಶಲ ತರಬೇತಿ ನೀಡುವ ಸಲುವಾಗಿ 29ನೇ ಬಹತ್ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳವನ್ನು ಜೂನ್ 10 ಮತ್ತು 11ರಂದು  ಆಯೋಜಿಸಲಾಗಿದೆ.ಈ ಉದ್ಯೋಗ ಮೇಳದಲ್ಲಿ ಸುಮಾರು 125ಕ್ಕಿಂತ ಹೆಚ್ಚು ಖಾಸಗಿ ರಂಗದ ಕಂಪೆನಿಗಳು ಭಾಗವಹಿಸಿ, ಸುಮಾರು 4000ಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಖಾಸಗಿ ಉದ್ಯಮದಾರರೊಂದಿಗೆ ಸಂದರ್ಶನಕ್ಕೆ ಕಳಿಸಲಾಗುತ್ತದೆ.ಉದ್ಯೋಗಕ್ಕೆ ಆಯ್ಕೆಯಾಗದ ಅಭ್ಯರ್ಥಿಗಳಿಗೆ ತರಬೇತಿ ಅಗತ್ಯವಿದ್ದಲ್ಲಿ ಉಚಿತ ಕೌಶಲ ತರಬೇತಿ ನೀಡಿ ಪ್ರಮಾಣಪತ್ರ ನೀಡುವುದರೊಂದಿಗೆ, ಖಾಸಗಿ ರಂಗದಲ್ಲಿ ಸೂಕ್ತವಾದ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು  ಕರ್ನಾಟಕ ವೃತ್ತಿ ತರಬೇತಿ  ಕೌಶಲ ಅಭಿವೃದ್ಧಿ ನಿಗಮ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ವಿಷ್ಣುಕಾಂತ ಚಟಪಲ್ಲಿ  ತಿಳಿಸಿದ್ದಾರೆ. ಜೂನ್ 11ರಂದು ಮಧ್ಯಾಹ್ನ 3 ಗಂಟೆಗೆ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪತ್ರ ವಿತರಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್ ಸಚಿವ ಜಗದೀಶ ಶೆಟ್ಟರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಮಿಕ ಇಲಾಖೆ ಕಾರ್ಯದರ್ಶಿ ಜಿ.ಎಸ್.  ನಾರಾಯಣಸ್ವಾಮಿ, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹಾಜರಿರುತ್ತಾರೆ ಎಂದು ಅವರು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗೆ ಮತ್ತು ಮುಂಚಿತ ನೋಂದಣಿ ಗಾಗಿ ಉದ್ಯೋಗಾರ್ಥಿಗಳು ಮತ್ತು ಉದ್ಯೋಗ ದಾತರು 080-23441 212/23441717 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.10 ಲಕ್ಷ ಜನರಿಗೆ ಉದ್ಯೋಗಾವಕಾಶ

ರಾಜ್ಯ ಸರ್ಕಾರ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸುವ ಮಹತ್ವಕಾಂಕ್ಷೆಯ ಯೋಜನೆಯನ್ನು ಹಾಕಿಕೊಂಡಿದೆ ಎಂದು ಅವರು ಹೇಳಿದ್ದಾರೆ

ಪ್ರಸ್ತುತ ವರ್ಷದಲ್ಲಿ 2.5 ಲಕ್ಷ ಜನರಿಗೆ ಕೌಶಲ ತರಬೇತಿ ನೀಡಿ ಕನಿಷ್ಠ 1.5 ಲಕ್ಷ ಉದ್ಯೋಗ ಒದಗಿಸಲು ಯೋಜಿಸಲಾಗಿದೆ.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೌಶಲ ಆಯೋಗವನ್ನು ರಚಿಸಲಾಗಿದ್ದು, ಅದರಲ್ಲಿ ವಿವಿಧ ಉದ್ಯಮಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಕೌಶಲ ಮತ್ತು ಉದ್ಯೋಗ ಮೇಳದ ಮುಖಾಂತರ ಉದ್ಯೋಗವನ್ನು ಕಲ್ಪಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ  28 ಬೃಹತ್ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಹಾಗೂ 171 ಮಿನಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ.

 

ಈ ಮೇಳಗಳಲ್ಲಿ 3000ಕ್ಕಿಂತ ಹೆಚ್ಚು ಉದ್ದಿಮೆದಾರರು ಹಾಗೂ 3.5 ಲಕ್ಷಕ್ಕಿಂತ ಹೆಚ್ಚು ಉದ್ಯೋಗಾ ಕಾಂಕ್ಷಿಗಳು ಭಾಗವಹಿಸಿದ್ದರು. ಉದ್ಯೋಗ ಮೇಳ ಮತ್ತು ತರಬೇತಿ ಮುಖಾಂತರ 2 ಲಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗಾವ ಕಾಶವನ್ನು ಒದಗಿಸಲಾಗಿದೆ. ಉದ್ಯೋಗ ಪಡೆಯಲು ಕೌಶಲ ಅಭಿವೃದ್ಧಿ ತರಬೇತಿ ಅವಶ್ಯಕತೆಯಿರುವ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೌಶಲ ತರಬೇತಿ ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry