ಸೋಮವಾರ, ಮಾರ್ಚ್ 1, 2021
30 °C

ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಾತರ, ಕುತೂಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಾತರ, ಕುತೂಹಲ

ಹುಬ್ಬಳ್ಳಿ: ನಗರದ ಕೇಶ್ವಾಪುರದ ಮಧುರಾ ಎಸ್ಟೇಟ್‌ನ ಎರಡನೇ ಮುಖ್ಯ ರಸ್ತೆಯಲ್ಲಿರುವ ಜಗದೀಶ ಶೆಟ್ಟರ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ದೂರವಾಣಿ ನಿರಂತರವಾಗಿ ರಿಂಗಣಿಸುತ್ತಿತ್ತು. ಫೋನ್ ಮಾಡಿದವರೆಲ್ಲರೂ ಕೇಳುತ್ತಿದ್ದುದು ಬರೀ ಏನಾಯಿತು, ಎಂದು ಆಗುತ್ತದೆ ಎಂಬ ಪ್ರಶ್ನೆಗಳನ್ನು ಮಾತ್ರ.

 ಶೆಟ್ಟರ ಅವರ ಆಪ್ತ ಸಹಾಯಕ ಸಿದ್ಧರಾಮ ಫೋನ್ ಎತ್ತಿ ಎಲ್ಲರಿಗೂ ಒಂದೇ ಉತ್ತರ ಹೇಳುತ್ತಿದ್ದರು-`ಇನ್ನೂ ಏನೂ ಗೊತ್ತಾಗಿಲ್ಲ...~ಜಗದೀಶ ಶೆಟ್ಟರ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ ಆದ ನಂತರವೂ ಉತ್ತರ ಕರ್ನಾಟಕದ ಮಂದಿಗೆ ಕುತೂಹಲ ತಡೆಯಲಾಗಲಿಲ್ಲ. ಆದರೆ ಶೆಟ್ಟರ ಕುಟುಂಬದವರೆಲ್ಲರೂ ಬೆಂಗಳೂರಿಗೆ ಹೋಗಿರುವುದರಿಂದ  ಅವರ ನಿವಾಸದತ್ತ ಇಡೀ ದಿನ ಕಾರ್ಯಕರ್ತರಾಗಲಿ, ಮುಖಂಡರಾಗಲಿ, ಸಾರ್ವಜನಿಕರಾಗಲಿ ಅತ್ತ ಸುಳಿಯಲಿಲ್ಲ.  ನಗರದ ಬಿಜೆಪಿ ಕಚೇರಿಯ ಕಡೆಗೂ ಕಾರ್ಯಕರ್ತರು ಸುಳಿಯಲಿಲ್ಲ. ಎಲ್ಲರೂ ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.ವಾಣಿಜ್ಯ ನಗರಿಯ ನೇತಾರ ಜಗದೀಶ ಶೆಟ್ಟರ ಅವರಿಗೆ ಮುಖ್ಯಮಂತ್ರಿ ಪಟ್ಟ ಘೋಷಣೆಯಾಗುವವರೆಗೂ ಕುತೂಹಲವನ್ನು ತಡೆಯದ ಕಾರ್ಯಕರ್ತರು ಸಂಭ್ರಮಕ್ಕೆ ಒಳಗೊಳಗೇ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯ ಅಧಿಕೃತ ಘೋಷಣೆಯಾಗುವವರೆಗೂ ಯಾವುದೇ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳದಂತೆ ಹಾಗೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಪಕ್ಷದ ಹೈಕಮಾಂಡ್‌ನಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.`ಎರಡನೇ ಬಾರಿಗೆ ಸಿಗಲಿದೆ ಅವಕಾಶ~

ಹುಬ್ಬಳ್ಳಿ:
  `ಜಗದೀಶ ಶೆಟ್ಟರ ಅವರು ಸಿಎಂ ಆಗಿ ಆಯ್ಕೆಯಾದಲ್ಲಿ ಹುಬ್ಬಳ್ಳಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿ ಅವಕಾಶ ದೊರೆಯಲಿದೆ. ಈ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲಿದೆ~ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.ನಗರದ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭ ಅವರು `ಪ್ರಜಾವಾಣಿ~ ಜೊತೆ ಮಾತನಾಡಿದರು.`ಶೆಟ್ಟರ ಸಿಎಂ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಅಂತಹ ಅವಕಾಶ ದೊರೆತಲ್ಲಿ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದ 24 ವರ್ಷಗಳ ಬಳಿಕ ಅದೇ ಊರಿನ ಮತ್ತೊಬ್ಬರು ಮುಖ್ಯಮಂತ್ರಿಯಾಗುತ್ತಾರೆ~ ಎಂದರು.

ಶೆಟ್ಟರ ಸಿಎಂ ಆದಲ್ಲಿ ಉಳಿದ ಅಧಿಕಾರದ ಅವಧಿಯನ್ನೂ ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಸದ್ಯ ಭಿನ್ನಾಭಿಪ್ರಾಯಗಳಿರುವುದು ನಿಜ. ಅದೆಲ್ಲವನ್ನೂ ಸರಿಪಡಿಸಿಕೊಂಡು, ಮುಂದಿನ ಚುನಾವಣೆಯಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವ ಸಾಮರ್ಥ್ಯ ಅವರಲ್ಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.