ಹುಬ್ಬಳ್ಳಿ ಕೃಷ್ಣನಿಗೆ ಬೆಳ್ಳಿ ಪದಕ

7

ಹುಬ್ಬಳ್ಳಿ ಕೃಷ್ಣನಿಗೆ ಬೆಳ್ಳಿ ಪದಕ

Published:
Updated:

ಹುಬ್ಬಳ್ಳಿ: ಭಾರತೀಯ ದೇಹದಾರ್ಢ್ಯ ಒಕ್ಕೂಟ (ಐಬಿ         ಬಿಎಫ್) ಪುಣೆಯಲ್ಲಿ ಈಚೆಗೆ ಸಂಘಟಿಸಿದ್ದ 49ನೇ ಕಿರಿಯರ ರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿಯ `ಹಮಾಲರ ಕಾಲೊನಿ ಹುಡುಗ~ ಕೃಷ್ಣ ಆರ್. ಚಿಕ್ಕತುಂಬಳ 80 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಸಿದ್ದಾರೆ.ಇದಕ್ಕೂ ಪೂರ್ವ ಪಂಜಾಬ್‌ನ ಅಮೃತಸರ್‌ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಕೃಷ್ಣ ನಾಲ್ಕನೇ ಸ್ಥಾನ ಗಳಿಸಿದ್ದರು. ಈಚೆಗೆ ಗ್ವಾಲಿಯರ್‌ನಲ್ಲಿ ನಡೆದ 51ನೇ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 85 ಕೆಜಿ ವಿಭಾಗದಲ್ಲಿ ಬಂಗಾರದ ನಗುವನ್ನೇ ಚೆಲ್ಲಿ ಬಂದಿದ್ದಾರೆ.ಬಡ ಕುಟುಂಬದ ಹಿನ್ನೆಲೆ ಹೊಂದಿದ್ದರೂ ಕೊರತೆಗಳ ಮಧ್ಯೆ ಅವರು ಸಾಧನೆ ಮೆರೆಯುತ್ತಿದ್ದಾರೆ. ಕ್ರೀಡಾ ವಿಕ್ರಮದ ಜತೆಗೆ ಅಧ್ಯಯನವನ್ನೂ ಮುಂದುವರಿಸಿರುವ ಅವರು ನಗರದ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಈ ಹುಡುಗನಿಗೆ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರ್ಥಿಕ ನೆರವು ಬೇಕಾಗಿದೆ. ಆಸಕ್ತರು ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ: 9900223016.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry