ಗುರುವಾರ , ಜೂನ್ 17, 2021
29 °C

ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹೆಚ್ಚಿನ ಜನದಟ್ಟಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಯಶವಂತಪುರ ಮತ್ತು ಯಶವಂತಪುರದಿಂದ ಅಹಮದಾಬಾದ್‌ಗೆ ವಿಶೇಷ ರೈಲು ಸೌಲಭ್ಯವನ್ನು  ನೈರುತ್ಯ ರೈಲ್ವೆ ಕಲ್ಪಿಸಿದೆ.ಇದೇ 11ರಂದು ರಾತ್ರಿ 10ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು (ಗಾಡಿ ನಂ. 06546) ಮರುದಿನ ಬೆಳಿಗ್ಗೆ 6.40ಕ್ಕೆ ಯಶವಂತಪುರ ತಲುಪಲಿದೆ. ಈ ರೈಲಿಗೆ ಹಾವೇರಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇದೆ. 16 ದ್ವಿತೀಯ ದರ್ಜೆ ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟಾರೆ 20 ಬೋಗಿಗಳನ್ನು ಈ ರೈಲು ಹೊಂದಿರಲಿದೆ.ಅದೇ ರೀತಿ 14ರಂದು ಬೆಳಿಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಡುವ ರೈಲು, ಮರುದಿನ ರಾತ್ರಿ 7.20ಕ್ಕೆ ಅಹಮದಾಬಾದ್ ತಲುಪಲಿದೆ. ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಗದಗ, ವಿಜಾಪುರ ಮೂಲಕ ಈ ರೈಲು ಪ್ರಯಾಣ ಬೆಳಸಲಿದೆ. ಒಟ್ಟಾರೆ 20 ಬೋಗಿಗಳನ್ನು ಈ ಎಕ್ಸ್‌ಪ್ರೆಸ್ ಹೊಂದಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.