ಹುಬ್ಳೀಕರ್‌ಗೆ ರಾಜ್ಯ ಪ್ರಶಸ್ತಿಯ ಗರಿ

7

ಹುಬ್ಳೀಕರ್‌ಗೆ ರಾಜ್ಯ ಪ್ರಶಸ್ತಿಯ ಗರಿ

Published:
Updated:

ದಾಂಡೇಲಿ: ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರುನಗರ ಸಂಯುಕ್ತ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ.ವಿ.ಹುಬ್ಳೀಕರ್ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿಯಿಂದ ಪುರಸ್ಕೃತರಾದರು.ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಮೂಲತಃ ಧಾರವಾಡದವರಾಗಿರುವ ಜಯರಾಜ ಹುಬ್ಳೀಕರ್ ತಮ್ಮ ಶಿಕ್ಷಣವನ್ನು ಧಾರವಾಡದಲ್ಲೇ ಪೂರೈಸಿದರು. ಎಂಎಸ್ಸಿ ಪದವಿಧರರು. 1983ರಿಂದ 85ರವರೆಗೆ ಬೆಳಗಾವಿ ಮತ್ತು ಮೊಣಕಾಲಮೂರುಗಳಲ್ಲಿ ಕಾರ್ಯನಿರ್ವಹಿಸಿರುವ ಇವರು 1985ರಲ್ಲಿ ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರುನಗರ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರ್ಪಡೆಯಾದರು. ಈಗ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾರೆ.ಹಿತಮಿತಭಾಷಿಗಳಾಗಿರುವ ಇವರು ಉತ್ತಮ ಉಪನ್ಯಾಸಕರು. ಮಕ್ಕಳಿಗೆ ಇವರೆಂದರೆ ಪ್ರೀತಿ ಅಭಿಮಾನ. ಪ.ಪೂ.ಇಲಾಖೆಯಿಂದ ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಿಗಾಗಿ ನಡೆಯುವ ಹಾಗೂ ಸಿಇಟಿ ಕುರಿತಾಗಿ ಚಂದನ ವಾಹಿನಿಯಲ್ಲಿ ತಮ್ಮ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry