ಗುರುವಾರ , ಜೂನ್ 24, 2021
21 °C

ಹುಮನಾಬಾದ್ ಪುರಸಭೆ: ಬಜೆಟ್ ಮಂಡನೆ:ನಗರ ಸೌಂದರ್ಯ, ಮೂಲಸೌಕರ್ಯಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ನಗರ ಸೌಂದರ್ಯ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಪುರಸಭೆಯ ಅಧ್ಯಕ್ಷೆ ಪದ್ಮಾವತಿ ಮಚಕೂರಿ ಅವರು ಸೋಮವಾರ ಮಂಡಿಸಿದ 2012-13ನೇ ಸಾಲಿನ ಬಜೇಟ್ ಪ್ರಸ್ತಾವಕ್ಕೆಗೆ ಸರ್ವ ಸದಸ್ಯರು ಬೆಂಬಲ ಸೂಚಿಸಿದರು.ಪುರಸಭೆ ಖಾತೆಯಲ್ಲಿ ಸದ್ಯ ಇರುವ ಹಣಕಾಸು, ವಿವಿಧ ಮೂಲಗಳಿಂದ ಸಂಗ್ರಹ ಆಗುವ ತೆರಿಗೆ, ವಿವಿಧ ಯೋಜನೆಗಳ ಅಡಿಯಿಂದ ಸರ್ಕಾರದಿಂದ ಬರುವ ಹಣಕಾಸು ವಿವರ ಮತ್ತು ವಾರ್ಷಿಕ ಖರ್ಚಿನ ಕುರಿತು ಪುರಸಭೆ ಮುಖ್ಯಾಧಿಕಾರಿ ಸತೀಶಗುಡ್ಡೆ ವಿಸ್ತೃತ ವಿವರಿಸಿದರು.ನಂತರ ವಸತಿ ನಿರ್ಮಾಣ ಪರವಾನಿಗೆ. ಅನಧಿಕೃತ ನಲ್ಲಿ ಸಂಪರ್ಕ ಕಡಿತಗೊಳಿಸುವುದು, ವಾಸಸ್ಥಳ ಪ್ರಮಾಣಪತ್ರ ನೀಡುವುದು ಮೊದಲಾದ ವಿಷಯಗಳ ಕುರಿತು ನಡೆದ ಗಂಭೀರ ಚರ್ಚೆ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸದಸ್ಯ ಬಬನ ಬಿರಾದಾರ ಮಾತನಾಡಿ, ಹುಮನಾಬಾದ್ ಪುರಸಭೆ ಸದಸ್ಯರಿಗೆ ಯಾರೂ ಬೆರಳುಮಾಡಿ ತೋರಿಸುವಂತಿಲ್ಲ.

 

ಈ ಜನಕ್ಕೆ ನಮ್ಮಂಥ ಸದಸ್ಯರೂ ಸಿಕ್ಕಿದ್ದು ಏಳು ಜನ್ಮಗಳ ಪುಣ್ಯ ಎಂದರು. ವಾಸಸ್ಥಳ ಪ್ರಮಾಣಪತ್ರ ಇತ್ಯಾದಿಗಳಿಗಾಗಿ ಸಾರ್ವಜನಿಕರನ್ನು ವಿನಾಕಾರಣ ಅಡ್ಡಾಡಲು ಹಚ್ಚಿ ತೊಂದರೆ ನೀಡಬೇಡಿ ಎಂದು ಸದಸ್ಯ ವಿನಾಯಕ ಯಾದವ್ ಸಲಹೆ ನೀಡಿದರು. ವಿವಿಧ ಪ್ರಮಾಣಪತ್ರ ವಿತರಣೆ ಕೆಲಸವನ್ನು ಕೆಲ ಸಿಬ್ಬಂದಿಗಳು ಗುತ್ತಿಗೆ ಹಿಡಿಯುತ್ತಿದ್ದು ಅದನ್ನು ತಕ್ಷಣದಿಂದಲೇ ನಿಲ್ಲಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

 

ಸದಸ್ಯರ ಆದೇಶ ಕುರಿತು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಸುದ್ದಿಗಾರರ ಎದುರು ಹೇಳಿದ್ದು ಹೀಗೆ ಆ ಆದೇಶ ಪುರಸಭೆಯ ಸರ್ವ ಸದಸ್ಯರಿಗೂ ಅನ್ವಯ ಆಗಬೇಕು ಎಂದು ತಿಳಿಸಿದರು.ವೀರಪ್ಪ ಆರ್ಯ, ಮಲ್ಲಿಕಾರ್ಜುನ ಸೀಗಿ, ತನುಜಾ ಧುಮಾಳೆ, ವೆಂಕಮ್ಮ, ವಿನಾಯಕ ಯಾದವ್, ವಿಜಯಕುಮಾರ ದುರ್ಗದ, ಬಾಬು ಜಾನವೀರ್, ಶೈನಾಜಾ ಸುಲ್ತಾನಾ, ಮಹೇಶ ಅಗಡಿ, ಗಿರೀಶ ಪಾಟೀಲ ಇತರರು ವಿವಿಧ ಸಮಸ್ಯೆ ಬಗೆಹರಿಸುವಂತೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಒತ್ತಾಯಿಸಿದರು.ಪಟ್ಟಣದಲ್ಲಿ ನೆನೆಗುದಿಗೆ ಬಿದ್ದ ಅನೇಕ ರಸ್ತೆ, ಚರಂಡಿಗಳನ್ನು ಶೀಘ್ರ ದುರುಸ್ತಿಗೊಳಿಸಿ, ಕತ್ತಲೆ ಆವರಿಸಿದ ಪ್ರದೇಶದಲ್ಲಿ ಶೀಘ್ರ ದೀಪ ಅಳವಡಿಸಬೇಕು ಎಂದು ಮಾಣಿಕರೆಡ್ಡಿ ಕರ್ಣಿ ಅವರು ಒತ್ತಾಯಿಸಿದರು. ಉಪಾಧ್ಯಕ್ಷ ಎಸ್.ಎ.ಬಾಸೀತ್ ಓಮರ್, ಸ್ಥಾಯಿ ಸಮಿತಿ ಅಧ್ಯಕ್ಷ ಗೋರೆಮಿಯ್ಯ ಸಭಾಂಗಣ ಚರ್ಚೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.