ಹುಮನಾಬಾದ್: ಬಿಎಸ್‌ಪಿ ಕಚೇರಿ ಉದ್ಘಾಟನೆ

7

ಹುಮನಾಬಾದ್: ಬಿಎಸ್‌ಪಿ ಕಚೇರಿ ಉದ್ಘಾಟನೆ

Published:
Updated:

ಹುಮನಾಬಾದ್: ಹುಮನಾಬಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಚೇರಿ ಉದ್ಘಾಟನಾ ಸಮಾರಂಭ ಭಾನುವಾರ ನೆರವೇರಿತು.ಕಚೇರಿ ಉದ್ಘಾಟಿಸಿ, ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ ರಾಜ್ಯದಲ್ಲಿ ಈವರೆಗೆ ಅಧಿಕಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆ.ಡಿಎಸ್ ಪಕ್ಷಗಳಿಂದ ಯಾವುದೇ ಜನಹಿತ ಕಾರ್ಯ ನಡೆದಿಲ್ಲ.

ಉದ್ಯೋಗ ಇಲ್ಲದೇ ವಿದ್ಯಾವಂತ ನಿರುದ್ಯೋಗಿಗಳು ಪರದಾಡುತ್ತಿರುವುದು ಗೊತ್ತಿದ್ದರೂ  ಉದ್ಯೋಗ ಸೃಷ್ಟಿ ಸಂಬಂಧ ಯಾವುದೇ ಯೋಜನೆ ರೂಪಿಸಿಲ್ಲ ಎಂದು ನೇರ ಆಪಾದಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮಬಾಳು- ಸಮಪಾಲು ಉದ್ದೇಶದ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡ ಅಂಕುಶ ಗೋಖಲೆ ಮಾತನಾಡಿ, ಹುಮನಾಬಾದ್ ವಿದಾನಸಭಾ ಕ್ಷೇತ್ರ  ಅನೇಕ ವರ್ಷಗಳಿಂದ ಒಂದೇ ಪರಿವಾರ ಕಪಿಮುಷ್ಟಿಯಲ್ಲಿ ಇರುವ ಕಾರಣ ಹೇಳಿಕೊಳ್ಳುವಂತಹ ಅಭಿವೃದ್ಧಿ ನಡೆಯದ ಕಾರಣ ಮುಂದಿನ ಚುನಾವಣೆ ಅಭಿವೃದ್ಧಿಗಾಗಿ ಬಿ.ಎಸ್‌ಪಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ಜಿಲ್ಲಾ ಅಧ್ಯಕ್ಷ ವಿಠ್ಠಲ್ ಡಾಕುಳಗಿ, ಪ್ರಧಾನ ಕಾರ್ಯದರ್ಶಿ ಜಿಲಾನಿ ಪಟೇಲ, ತಾಲ್ಲೂಕು ಘಟಕ ಅಧ್ಯಕ್ಷ ಶಂಕರ ಪ್ರೀಯಾ ಮಾತನಾಡಿದರು. ಫಾರೂಕ್ ಇತರರು ಇದ್ದರು. ದಲಿತ ಮುಖಂಡ ಸುದರ್ಶನ ಮಾಳಗೆ ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.ಜಲೀಲ್ ಅಹ್ಮದ್ ಸ್ವಾಗತಿಸಿದರು. ಸಂಜೀವಕುಮಾರ ಜಂಜೀರ್ ನಿರೂಪಿಸಿದರು. ಚೇತನಕುಮಾರ ಗೋಖಲೆ ವಂದಿಸಿದರು. ಇದಕ್ಕೂ ಮುನ್ನ ವಾಂಜ್ರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಬೈಕ್‌ರ‌್ಯಾಲಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry