ಶುಕ್ರವಾರ, ಮೇ 7, 2021
23 °C

ಹುಮನಾಬಾದ್: ಶಿವಾಜಿ ಭಾವಚಿತ್ರದ ಭವ್ಯ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ತಾಲ್ಲೂಕು ಆಡಳಿತ ವತಿಯಿಂದ ಛತ್ರಪತಿ ಶಿವಾಜಿ ಅವರ 382ನೆಯ ಜಯಂತಿ ಆಚರಣೆ ಅಂಗವಾಗಿ ಸೋಮವಾರ ಬೆಳಿಗ್ಗೆ ಶಿವಾಜಿ ಭಾವಚಿತ್ರ ಭವ್ಯ ಮೆರವಣಿಗೆ ನಡೆಸಲಾಯಿತು.ಪಟ್ಟಣದ ಮಿನಿವಿಧಾನ ಸೌಧ ಸಭಾಂಗಣದಲ್ಲಿ ಶಾಸಕ ರಾಜಶೇಖರ ಪಾಟೀಲ ಅವರು ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸೂಚಿಸಿದರು. ನಂತರ ಶಿವಾಜಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಪ್ರವಾಸಿ ಮಂದಿರ, ಕೇಂದ್ರ ಬಸ್‌ನಿಲ್ದಾಣ ಅಲ್ಲಿಂದ ನಗರದ ಮುಖ್ಯ ಬೀದಿಗಳ ಮೂಲಕ ಹೊರಟು ರಥ ಮೈದಾನ ತಲುಪಿತು. ವೈವಿಧ್ಯಮಯ ವಾದ್ಯಮೇಳ, ಮರಾಠಾ ಸಮಾಜ ಮುಖಂಡರ ಜೈಘೋಷಗಳು ಮೆರವಣಿಗೆ ಮೆರಗು ಹೆಚ್ಚಿಸಿದವು.ಖ್ಯಾತ ಪ್ರವಚನಕಾರ ಪುಣೆಯ ರೋಹಿದಾಸ ಹಂಡೆ ಮಹಾರಾಜ, ಜಿಲ್ಲಾ ಪಂಚಾಯಿತಿ ಸದಸ್ಯೆ ತಂಗುಬಾಯಿ ಮಾಣಿಕರಾವ ಪರಾಂಜಪೆ, ಪುರಸಭೆ ಅಧ್ಯಕ್ಷೆ ಪದ್ಮಾವತಿ ಶಿವಾಜಿರಾವ ಮಚಕೂರಿ, ತಹಸೀಲ್ದಾರ ಸಿ.ಲಕ್ಷ್ಮಣರಾವ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಮರಾಠಾ ಸಮಾಜ ಮುಖಂಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪದ್ಮಾಕರ ಪಾಟೀಲ, ನಸ್ಸೀಮುದ್ದೀನ್ ಪಟೇಲ, ಗಣ್ಯರಾದ ಮಾಣಿಕಪ್ಪ ಗಾದಾ, ಬಬನರಾವ ಬಿರಾದಾರ, ರವಿಕುಮಾರ ಘವಾಳಕರ್, ಡಾ.ಪ್ರಕಾಶ ಪಾಟೀಲ,

 

ಬಾಬು ಟೈಗರ್, ಪ್ರಕಾಶ ಬತಲಿ, ವೆಂಕಟರಾವ ಪಾಟೀಲ, ಭಗವಾನ್ ಕಾಳೆ, ಬಾಲಾಜಿ ಪಾಟೀಲ, ಪ್ರಮೋದಕುಮಾರ ಮುಳೆ, ತನುಜಾ ಧುಮಾಳೆ, ವಿನಾಯಕ ಯಾದವ್, ಶಿವರಾಜ ಗಂಗಶೆಟ್ಟಿ, ನರೇಂದ್ರ ಪ್ರಸಾದ ಮಿಶ್ರಾ, ರಮೇಶ ಕ್ಷೀರಸಾಗರ್, ದಯಾನಂದ ಘವಾಳಕರ್, ಸಂಜಯ್ ದಂತಕಾಳೆ, ನಾರಾಯಣರೆಡ್ಡಿ ಮಂಗಲಗಿ, ಮಲ್ಲಿಕಾರ್ಜುನ ಮಾಶೆಟ್ಟಿ, ಈಶ್ವರ ಕಲ್ಬುರ್ಗಿ, ರಾಜಪ್ಪ ಇಟಗಿ, ಪ್ರಭುರಾವ ತಾಳಮಡಗಿ, ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.