ಭಾನುವಾರ, ಜೂನ್ 13, 2021
21 °C

ಹುಲಿಕೆರೆ ಟನಲ್: ಉನ್ನತ ತಂತ್ರಜ್ಞಾನ ಬಳಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸುರಕ್ಷತೆಗೆ ಒತ್ತು ನೀಡಲು ಹುಲಿಕೆರೆ ಟನಲ್ ಸುರಂಗ ಮಾರ್ಗ ವನ್ನು ಉನ್ನತ ತಂತ್ರಜ್ಞಾನದಿಂದ ಆಧುನೀಕರಣ ಮಾಡಬೇಕಿದ್ದು, ಈ ಬಗ್ಗೆ ತಾಂತ್ರಿಕ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಪಡಿಸಿದೆ.  ಸುರಂಗ ಮಾರ್ಗ ದುರ್ಬಲವಾಗಿದೆ ಎನ್ನುವುದನ್ನು ಮಣ್ಣು ಕುಸಿದಿರುವುದು ಬಿಂಬಿಸಿದೆ. ಹೀಗಾಗಿ, ಈ ಮಾರ್ಗವನ್ನು ಆಧುನೀಕರಣ ಮಾಡಬೇಕಿದೆ. ಅದಕ್ಕೂ ಮುನ್ನ ಭೂ ಗರ್ಭ ಮತ್ತು ನೀರಾವರಿ ತಜ್ಞರ ಸಲಹೆ, ವರದಿ ಪಡೆದು ಕೊಳ್ಳಬೇಕಿದೆ ಎಂದು ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.ಸುರಂಗ ಮಾರ್ಗದ ಆಧುನೀಕರಣಕ್ಕೆ ಹೆಚ್ಚಿನ ಹಣವನ್ನು ಒದಗಿಸಿ ತುರ್ತಾಗಿ ಕಾಮಗಾರಿ ಕೈಗೊಳ್ಳುವಂತೆ ಕೆಲಸ ಆರಂಭಿಸುವ ಮುನ್ನ ನೀರಾವರಿ ಸಚಿವರು, ಈ ಭಾಗದ ಜನಪ್ರತಿನಿಧಿಗಳು, ರೈತ ಮುಖಂಡರ ಜೊತೆ ಚರ್ಚಿಸಿಬೇಕು ಎಂದು ಹೇಳಿದರು.ನಿಷೇಧಿತ ಪ್ರದೇಶವೆಂದು ಘೋಷಿಸಿ: ಸುರಂಗ ಮಾರ್ಗ ಹಾದುಹೋಗಿರುವ ಮೇಲ್ಭಾಗವನ್ನು `ನಿಷೇಧಿತ ಪ್ರದೇಶ~ ಎಂದು ಘೋಷಿಸಬೇಕು. ಆ ಮೂಲಕ, ಕೃಷಿ ಚಟುವಟಿಕೆ ಕೈಗೊಳ್ಳುವುದು, ಮನೆ ನಿರ್ಮಾಣ ಹಾಗೂ ಮಣ್ಣು ತೆಗೆಯುವುದಕ್ಕೆ ನಿಬರ್ಂಧ ಹೇರಬೇಕು ಎಂದು ಹೇಳಿದರು.ಭವಿಷ್ಯದ ಅಪಾಯದ ಅರಿವಿಲ್ಲದ ಕೆಲ ರೈತರು, ಸುರಂಗ ಮಾರ್ಗದ ಮೇಲ್ಭಾಗದಲ್ಲಿ ಕೃಷಿ ಮಾಡು ತ್ತಿದ್ದಾರೆ. ಮಣ್ಣು ತೆಗೆಯುವುದು, ಮನೆ ನಿರ್ಮಾಣವೂ ಮುಂದುವರೆದಿದೆ. ಇದರಿಂದ ಸುರಂಗ ಸುರಕ್ಷತೆಗೆ ಧಕ್ಕೆ ಆಗಲಿದ್ದು, ಲಕ್ಷಾಂತರ ರೈತರು ಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ, ನೀರಾವರಿ ಸಲಹಾ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.ಮುಖಂಡರಾದ ಹನಿಯಂಬಾಡಿ ನಾಗರಾಜು, ಎಚ್.ರಾಮಕೃಷ್ಣಯ್ಯ, ಜವರೇಗೌಡ, ಬೊಮ್ಮೇ ಗೌಡ, ಮರಿಲಿಂಗೇಗೌಡ, ರಮೇಶ್ ಹಾಜರಿದ್ದರು.ಕಾರ್ಯಾಗಾರ ನಾಳೆ

ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆಗಳು ವಿಷಯ ಕುರಿತ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಮಾ. 21ರಂದು ನಾಗಮಂಗಲದ ಆದಿಚುಂಚನಗಿರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.ಶಿಕ್ಷಣ, ಕೈಗಾರಿಕೆ, ನೀರಾವರಿ, ಕೃಷಿ, ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ ಸಂಬಂಧಿಸಿದಂತೆ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದ ಯೋಜನೆಗಳು ಕುರಿತಂತೆ  ತಜ್ಞರು ವಿಷಯ ಮಂಡಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆದಿಚುಂಚನಗಿರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕೆ.ಪುಟ್ಟರಂಗಪ್ಪ ತಿಳಿಸಿದರು.ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎನ್.ಎಸ್.ರಾಮೇಗೌಡ ಉದ್ಘಾಟಿ ಸಲಿದ್ದು, ಪ್ರಾಚಾರ್ಯ ಪ್ರೊ. ಕೆ.ಎಂ.ಸ್ವಾಮಿಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರಿಗೆ ಒಒಡಿ ಸೌಲಭ್ಯವಿದೆ ಎಂದರು.ಮಾಹಿತಿಗೆ ಮೊ.ಸಂ. 08234-286061 ಸಂಪರ್ಕಿಸಲು ಕೋರಿದರು. ಉಪನ್ಯಾಸಕ ಪ್ರೊ. ಸಿದ್ದರಾಜು ಆಲಕೆರೆ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.