ಗುರುವಾರ , ಜೂನ್ 24, 2021
22 °C

ಹುಲಿಕೆರೆ ಟನಲ್: ಬುಧವಾರದ ವೇಳೆಗೆ ನೀರು ಹರಿವು ಯಥಾಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿಕೆರೆ ಟನಲ್: ಬುಧವಾರದ ವೇಳೆಗೆ ನೀರು ಹರಿವು ಯಥಾಸ್ಥಿತಿ

ಮಂಡ್ಯ: ಹುಲಿಕೆರೆ ಟನಲ್ ಸುರಂಗ ಮಾರ್ಗ ಮಧ್ಯೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕೆಲಸ ಭಾನುವಾರ ಮಧ್ಯಾಹ್ನದಿಂದ ಆರಂಭಗೊಂಡಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಮುಗಿಯಲಿದ್ದು, ಬುಧವಾರ (ಮಾ. 21) ಸಂಜೆ ವೇಳೆಗೆ ನಾಲೆಗೆ ನೀರನ್ನು ಹರಿಯಬಿಡಲಾಗುತ್ತದೆ.`ಜೀವನದಿ~ ಕಾವೇರಿ ವಿಶ್ವೇಶ್ವರಯ್ಯ ನಾಲೆ ಮೂಲಕ ಹಾದುಹೋಗಲು ಕೊರೆದಿರುವ ಈ ಸುರಂಗ ಮಾರ್ಗದ 2ನೇ ಕಿ.ಮೀ. ಸಮೀಪ ಮಣ್ಣು ಕುಸಿದಿದ್ದು, ಗುರುವಾರ (15) ಬೆಳಕಿಗೆ ಬಂದಿತ್ತು. ಶುಕ್ರವಾರವೂ ಸಹ ಸ್ವಲ್ಪ ಮಟ್ಟಿಗೆ ಮಣ್ಣು ಕುಸಿತ ಕಂಡಿದ್ದು, ರೈತರನ್ನು ಆತಂಕಕ್ಕೆ ದೂಡಿತ್ತು.ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕರಾದ ಸಿ.ಎಸ್.ಪುಟ್ಟರಾಜು, ಕಲ್ಪನಾ ಸಿದ್ದರಾಜು, ಎ.ಬಿ.ರಮೇಶ್‌ಬಾಬು, ಎಂ.ಶ್ರೀನಿವಾಸ್, ಬಿ.ರಾಮಕೃಷ್ಣ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಸದಸ್ಯ ರಾದ ಎಸ್.ಸಿ.ಶಂಕರಗೌಡ, ಸಿ.ಮಾದಪ್ಪ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ನಂತರ, ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪುಟ್ಟರಾಜು, ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೆ ಒಳಗಾಗುವುದು ಬೇಡ. ಇನ್ನೆ ರಡು ದಿನಗಳಲ್ಲಿ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ, ನಾಲೆಗೆ ನೀರು ಬಿಡಲಾಗುವುದು. ಹೀಗಾಗಿ, ರೈತರು ಬೆಳೆ ನಷ್ಟ ಅಥವಾ ಸುರಂಗ ಸುರಕ್ಷತೆ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದು ಕೋರಿದರು.ಸುರಂಗ ಮಧ್ಯೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಸಂಬಂಧ ಸಲಹೆ ನೀಡಲು ತಾಂತ್ರಿಕ ತಜ್ಞರೊಬ್ಬ ರನ್ನು ಸರ್ಕಾರ ನಿಯೋಜಿಸಿದ್ದು, ಅವರ ಸಲಹೆ ಮೇರೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದಾರೆ. ಇದಕ್ಕೆ ರೈತರು ಸಹ ಅಗತ್ಯ ಸಹಕಾರ ನೀಡಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯ ಎಲ್ಲ ನಾಲೆಗಳ ಆಧುನೀಕ ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದೆ.ನಾಲೆ ಎರಡೂ ಬದಿಯಲ್ಲಿ ಶಾಶ್ವತ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ 175 ಕೋಟಿ ರೂ. ಒದಗಿಸುವ ಆಶ್ವಾಸನೆ ನೀಡಿದ್ದಾರೆ ಎಂದರು.ನಾಲೆ ಬಗೆಗೆ ಒಂದಿಷ್ಟು: ಸುರಂಗವು ಸುಮಾರು 2.8 ಕಿ. ಮೀ. ಉದ್ದ; 3.75 ಮೀ. ಅಗಲ; 4.5 ಮೀ. ಎತ್ತರದ ಕಮಾನು ಹೊಂದಿದ್ದು, 2200ಕ್ಕೂ ಹೆಚ್ಚಿನ ಕ್ಯೂಸೆಕ್ ನೀರಿನ ಹರಿವಿದೆ. 1928ರ ಜೂನ್‌ನಿಂದ -1931ರ ಅಕ್ಟೋಬರ್ ನಡುವೆ ಈ ಸುರಂಗದ ಕೆಲಸ ಪೂರ್ಣಗೊಂಡಿದೆ.ಮೈಸೂರು ಸಂಸ್ಥಾನದ ಮಹಾ ರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದ ಸಂದರ್ಭದಲ್ಲಿ ಈ ಸುರಂಗ ಮಾರ್ಗವು ನಿರ್ಮಾಣವಾಗಿತ್ತು.

 ಕೆ.ಎನ್.ನಾಗೇಗೌಡ  ನೀರಾವರಿ ಮಂತ್ರಿಯಾ ಗಿದ್ದಾಗ ಈ ನಾಲೆಯ ಆಧುನೀಕರಣ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.