ಗುರುವಾರ , ಜೂಲೈ 9, 2020
21 °C

ಹುಲಿಗಳ ಸಂಖ್ಯೆ ಶೇ 12ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿಗಳ ಸಂಖ್ಯೆ ಶೇ 12ರಷ್ಟು ಹೆಚ್ಚಳ

ನವದೆಹಲಿ (ಪಿಟಿಐ): 19 ರಾಜ್ಯಗಳ 6.25 ಸಾವಿರ ಕಿ.ಮೀ ಅರಣ್ಯ ಪ್ರದೇಶದಲ್ಲಿ ಸುಮಾರು 9 ಕೋಟಿ ರೂಪಾಯಿ ವೆಚ್ಚ ಮಾಡಿ ನಡೆಸಿದ 2010ರ ಹುಲಿ ಗಣತಿಯ ವರದಿ ಸೋಮವಾರ ಹೊರಬಿದ್ದಿದ್ದು, ಹುಲಿಗಳ ಸಂಖ್ಯೆಯಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ.ಕರ್ನಾಟಕದಲ್ಲಿಯೇ ಸುಮಾರು 300ರಿಂದ 320ರಷ್ಟು ಹುಲಿಗಳಿದ್ದು,  ದೇಶದಲ್ಲಿಯೇ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು 412ರಿಂದ 534 ಹುಲಿಗಳಿವೆ ಎನ್ನಲಾಗಿದೆ. ನಾಗರಹೊಳೆ, ಮದುಮಲೈ ಮತ್ತು ವಯನಾಡು ಅರಣ್ಯ ಪ್ರದೇಶದಲ್ಲಿ ಒಟ್ಟು 354 ಹುಲಿಗಳಿವೆ.

ಸುಂದರಬನ ಅರಣ್ಯ ಪ್ರದೇಶವನ್ನು ಹೊರತುಪಡಿಸಿ 2006ರಲ್ಲಿ ನಡೆಸಿದ ಗಣತಿಯಲ್ಲಿ 1411 ರಷ್ಟಿದ್ದ ಹುಲಿಗಳ ಸಂಖ್ಯೆ, ಸುಂದರಬನ ಅರಣ್ಯ ಪ್ರದೇಶ ಸೇರಿದಂತೆ 2010ರ ಗಣತಿಯಲ್ಲಿ 1706ಕ್ಕೆ ಏರಿಕೆ ಆಗಿದೆ ಎಂದು ಗಣತಿಯ ವರದಿ ಅಂಕಿ ಅಂಶಗಳು ಹೇಳಿವೆ.

ಹುಲಿಗಳ ಸಂಖ್ಯೆ ಶೇ 12ರಷ್ಟು ಅಧಿಕವಾಗಿರುವ ಸುದ್ದಿ ಸಂತೋಷ ತಂದಿದೆ ಎಂದು ಹೇಳಿದ  ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್   ಅವರು  ಪರಿಸರ ಹಾಗೂ ಅಭಿವೃದ್ಧಿ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಹೇಳಿದರು.ಡಿಸೆಂಬರ್ 2009ರಿಂದ 2010 ರವರೆಗೆ ಮೂರು ಹಂತಗಳಲ್ಲಿ ನಡೆದ ಹುಲಿ ಗಣತಿ ಕಾರ್ಯದಲ್ಲಿ ಸುಮಾರು 4ಲಕ್ಷ 76ಸಾವಿರ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.