ಗುರುವಾರ , ಏಪ್ರಿಲ್ 15, 2021
31 °C

ಹುಲಿ ಅಭಯಾರಣ್ಯದಲ್ಲಿ ಪ್ರವಾಸೋಧ್ಯಮ ನಿಷೇಧ ಮುಂದುವರಿಸಿದ ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದೆಹಲಿ (ಪಿಟಿಐ): ಹುಲಿ ಅಭಯಾರಣ್ಯದಲ್ಲಿ ಪ್ರವಾಸೋಧ್ಯಮ ಚಟುವಟಿಕೆ ಮೇಲೆ ಹೇರಿದ್ದ ನಿಷೇಧವನ್ನು ವಿಸ್ತರಿಸಿರುವ ಸುಪ್ರೀಂ ಕೋರ್ಟ್, ದೇಶದಲ್ಲಿ ಕ್ಷೀಣಿಸುತ್ತಿರುವ ಹುಲಿ ಸಂತತಿ ರಕ್ಷಣೆಗೆ ಮುಂದಾಗಲು ಕೇಂದ್ರಕ್ಕೆ ಸೂಚಿಸಿದೆ.

ಹುಲಿ ಅಭಯಾರಣ್ಯದಲ್ಲಿ ಪ್ರವಾಸೋಧ್ಯಮವನ್ನು ನಿಷೇಧಿಸಿ ಜುಲೈ 24ರಂದು ಎ.ಕೆ.ಪಟ್ನಾಯಕ್ ಹಾಗೂ ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ಪೀಠವು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೊಸ ಅರ್ಜಿಯನ್ನು ಕೇಂದ್ರವು ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪೀಠವು ಕೆಲವೊಂದು ವಿವರಣೆಗಳನ್ನು ನೀಡುವಂತೆ ಕೇಂದ್ರವನ್ನು ಕೇಳಿದೆ.

`ಹುಲಿಗಳನ್ನು ರಕ್ಷಿಸಲು ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ? ಈ ಮೊದಲು 13 ಸಾವಿರ ಹುಲಿಗಳಿದ್ದವು. ಈಗ ಅದರ ಸಂಖ್ಯೆ 1200ಕ್ಕೆ ಇಳಿದಿದೆ. ವಾಣಿಜ್ಯ ಚಟುವಟಿಕೆಗಳ ಕುರಿತು ನೀವು ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದೀರಿ. ಅರ್ಜಿ ಹಾಕುವುದನ್ನು ಬಿಟ್ಟು ಕೇಂದ್ರ ಸರ್ಕಾರ ಹುಲಿ ಸಂತತಿ ರಕ್ಷಿಸುವತ್ತ ಯಾವ ಕ್ರಮವೂ ತೆಗೆದುಕೊಂಡಿಲ್ಲ. ಹಾಗಾದರೆ ಪ್ರವಾಸೋಧ್ಯಮ ನಿಷೇಧಿಸುವಂತೆ ಮೊದಲು ಏಕೆ ಶಿಫಾರಸು ಮಾಡಿದಿರಿ~ ಎಂದು ಪೀಠವು ಕೇಂದ್ರದ ಕೌನ್ಸಲ್ ವಸೀಮ್ ಅಹಮದ್ ಕದಿರಿ ಅವರನ್ನು ಕೇಳಿದೆ.

ಅಂತಿಮವಾಗಿ ಪೀಠವು ಮಧ್ಯಂತರ ನಿಷೇದಾಜ್ಞೆಯನ್ನು ಆಗಸ್ಟ್ 29ರಂದು ನಡೆಯುವ ಮುಂದಿನ ವಿಚಾರಣೆಯವರೆಗೂ ವಿಸ್ತರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.